Thursday, May 2, 2013

ಬಿ.ಜೆ.ಪಿ. ಬೃಹತ್ ರೋಡ್ ಶೋ



 :
ಭಾರತೀಯ ಜನತಾ ಪಕ್ಷದ ಬೃಹತ್ ರೋಡ್ ಶೋ ಕಾರ್ಯಕ್ರಮವು ದಿ. ೦೩-೦೫-೨೦೧೩, ಶುಕ್ರವಾರದಂದು ಶ್ರೀ ಗವಿಮಠದಿಂದ ಸಾರ್ವಜನಿಕ ಮೈದಾನದವರೆಗೆ ಸಮಯ ಮಧ್ಯಾಹ್ನ ೧೨ ಗಂಟೆಯಿಂದ ೪ ಗಂಟೆಯವರೆಗೆ ನಡೆಯಲಾಗುವುದು. ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣನವರ ಮತ ಯಾಚನೆಯ ಈ ರೋಡ್ ಶೋ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾ, ತಾಲೂಕು, ಹೋಬಳಿ, ಮಹಿಳಾ ಘಟಕದ ಎಲ್ಲ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಬಿ.ಜೆ.ಪಿ. ಪ್ರಚಾರ ಸಮಿತಿ ವಕ್ತಾರ ಹಾಲೇ ಕಂದಾರಿ ತಿಳಿಸಿದ್ದಾರೆ.

ಭಾಗ್ಯನಗರ ಗ್ರಾಮದಲ್ಲಿ ಕರಡಿ ಸಂಗಣ್ಣ ರೋಡ್ ಶೋ





ಭಾಗ್ಯನಗರ ಗ್ರಾಮದಲ್ಲಿ ಕರಡಿ ಸಂಗಣ್ಣನವರ ನೇತೃತ್ವದಲ್ಲಿ ಬಿ.ಜೆ.ಪಿ.ಯ ಧುರೀಣರ ಹಾಗೂ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಪರವಾಗಿ ಮತ ಯಾಚನೆ ಮಾಡುತ್ತ ಬೃಹತ್ ಸಂಖ್ಯೆಯಲ್ಲಿ ರೋಡ್ ಶೋ ನಡೆಸಿದರು.

ಮನೆಯಂಗಳಕ್ಕೆ ಉನ್ನತ ಶಿಕ್ಷಣ : ಕರಡಿ ಸಂಗಣ್ಣ


ಕೋಳೂರು, ಕೊಪ್ಪಳ, ೦೨ : ಭಾರತೀಯ ಜನತಾ ಪಕ್ಷವು ಸಂಪೂರ್ಣವಾಗಿ ಜನರ ಹಿತ ಕಾಯುವ ಪಕ್ಷವಾಗಿದ್ದು, ಜನಪರ ಆಡಳಿತವನ್ನೇ ನೀಡಿದೆ. ಪಟ್ಟಣ ಮತ್ತು ಗ್ರಾಮೀಣ ಎರಡೂ ಪ್ರದೇಶಗಳ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ಅಭಿವೃದ್ಧಿ ಯೋಜನೆಗಳು ನಮ್ಮ ಭಾಗಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ತಲುಪಿದ್ದು, ಈ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿವೆ. ಈ ಭಾಗದ ೬೦ ಸಾವಿರ ಎಕರೆ ಭೂಮಿಯನ್ನು ಸದೃಢಗೊಳಿಸಲಿರುವ  ಪಾರದರ್ಶಕವಾಗಿರುವ ಕೃಷ್ಣಾ ಬಿ. ಸ್ಕೀಂ, ಸಿಂಗಟಾಲೂರು ಏತ ನೀರಾವರಿ, ಬೆಟಗೇರಿ ಏತ ನೀರಾವರಿ ಯೋಜನೆಗಳು ರೈತರ ಜೀವನವನ್ನು ಸದೃಢಗೊಳಿಸಲಿವೆ. ಇದರಿಂದ ರೈತರ ಒಡೆತನದ ಸಕ್ಕರೆ ಕಾರ್ಖಾನೆಯ ಯೋಜನೆಯೂ ಇದ್ದು, ಇದು ರೈತರ, ಗ್ರಾಮೀಣ ಭಾಗದವರ ಏಳಿಗೆಗೆ ಸಹಕಾರಿಯಾಗಲಿದೆ.
ಮರೀಚಿಕೆ ಮತ್ತು ನಮ್ಮ ಭಾಗದವರಿಗೆ ಸರಳವಾಗಿ ಕೈಗೆಟುಕದಂತಿದ್ದ ಉನ್ನತ ಶಿಕ್ಷಣವು ನಮ್ಮ ಮನೆಯಂಗಳಕ್ಕೆ ಬಂದಿದೆ. ವೈದ್ಯಕೀಯ, ಇಂಇನಿಯರಿಂಗ್, ತೋಟಗಾರಿಕಾ ಕಾಲೇಜುಗಳು ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಕೇಂದ್ರೀಯ ವಿದ್ಯಾಲಯಕ್ಕೆ ಅನುದಾನ ಹೀಗೆ ನಮ್ಮ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಿದೆ. ಹಿಟ್ನಾಳ ಮತ್ತು ಬಂಡಿ ಹರ್ಲಾಪೂರಗಳಲ್ಲಿ ಡಿಗ್ರಿ ಕಾಲೇಜುಗಳು ನಮ್ಮ ಅವಧಿಯಲ್ಲೇ ಆದವುಗಳಾಗಿವೆ. ಇವುಗಳಲ್ಲದೇ ಸಿ.ಸಿ. ರಸ್ತೆ, ಕೊಳವೆ ಬಾವಿ ಮಂಜೂರಾತಿ, ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ ಇವೇ ಮುಂತಾದ ಪಾರದರ್ಶಕ ಮತ್ತು ಜನಪರ ಕೆಲಸಗಳನ್ನು ಬೇರೆ ಯಾವ ಪಕ್ಷವೂ ಮಾಡದ ರೀತಿಯಲ್ಲಿ ಶೀಘ್ರಗತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ. ಈ ಎಲ್ಲ ಯೋಜನೆಗಳೊಂದಿಗೆ ಇನ್ನೂ ನಮ್ಮ ಭಾಗಕ್ಕೆ ಸಲ್ಲಬೇಕಾಗಿರುವ ಅನೇಕ ಅಭಿವೃದ್ಧಿ ಯೋಜನೆಗಳು ಮುಂದುವರಿಯುವ ನಿಟ್ಟಿನಲ್ಲಿ, ಬಿ.ಜೆ.ಪಿ.ಗೆ ಮತ ಹಾಕಬೇಕು ಎಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ದಿ. ೦೨.೦೫.೧೩ ರಂದು ಕೊಪ್ಪಳ ಸಮೀಪದ ಬಂಡಿ ಹರ್ಲಾಪೂರ ಗ್ರಾಮದಲ್ಲಿ ಬಿ.ಜೆ.ಪಿ. ಪ್ರಚಾರ ಭಾಷಣದಲ್ಲಿ ಮತ ಯಾಚನೆ ಮಾಡುತ್ತ ಈ ಮೇಲಿನಂತೆ ನುಡಿದರು.
ಮಹಿಳಾ ಧುರೀಣೆ ಹೇಮಲತಾ ನಾಯಕ್ ಮಾತನಾಡಿ, ಕರಡಿ ಸಂಗಣ್ಣನವರು ಅಭಿವೃದ್ಧಿ ಹರಿಕಾರರಾಗಿದ್ದು, ಅವರು ಮಾಡಿದ ಕೆಲಸಗಳು, ತಂದ ಯೋಜನೆಗಳು ನಮ್ಮ ಕಣ್ಣ ಮುಂದೆಯೇ ಇದ್ದು, ಮೂಲಭೂತ ಸೌಕರ್ಯಗಳಿಂದ ಹಿಡಿದು, ಶಿಕ್ಷಣ, ಆರ್ಥಿಖ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಶ್ರಮ ಪಟ್ಟಿದ್ದಾರೆ. ದಣಿವರಿಯದ ಜನನಾಯಕರಂತಿದ್ದು, ಅವರಿಂದ ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ, ರೈತರ ಸಾಲ ಮನ್ನಾ, ಮಕ್ಕಳಿಗೆ ಬಾಲ ಭವನ, ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಜಿಲ್ಲಾ ಕ್ರೀಡಾಂಗಣ, ಹೈ ಮಾಸ್ಕ್ ದೀಪಗಳು, ಹೀಗೆ ಹಲವಾರು ಉತ್ತಮ ಕೆಲಸಗಳು ಆಗಿದ್ದು, ನಮ್ಮ ಈ ಭಾಗದ ಅಭಿವೃದ್ಧಿಗಾಗಿ ಮತ್ತೆ ಅವರನ್ನು ಬೆಂಬಲಿಸಬೇಕೆಂದು ಹೇಳುತ್ತ ಮತ ಯಾಚನೆ ಮಾಡಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಪೀರಾಹುಸೇನ ಹೊಸಳ್ಳಿ, ವಿರೂಪಾಕ್ಷಪ್ಪ ನವೋದಯ ಬಾಬಾ ಅರಗಂಜಿ, ಹಾಲೇಶ ಕಂದಾರಿ ಮೊದಲಾದವರು ಉಪಸ್ಥಿತರಿದ್ದರು

Tuesday, April 30, 2013

ಕರಡಿ ಸಂಗಣ್ಣನವರ ಗೆಲುವಿಗೆ ದೀಡ್ ನಮಸ್ಕಾರ


೧ ಹುಲಗಿ : ಗ್ರಾಮದಲ್ಲಿ ಕೆ. ಕೃಷ್ಣಪ್ಪ ಪ್ಯಾರಮಾಳರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಹುಲಗಿ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಅಮರೇಶ ಅರಡಿ, ವೀರನ ಗೌಡ್ರ, ವಸಂತ ನಾಯಕ, ಬಸವರಾಜ, ಮುಸತ್ತಪ್ಪ, ವಿ.ಅಗಸಿ, ಗಾಳೇಶ, ವೀರಪಾಕ್ಷಿ, ಸಿದ್ದು ರಾಮಣ್ಣ, ಸಂಕ್ರಪ್ಪ ವಿಜಯ ಕರಡಿ, ಹುಲಗಿ ಮತ್ತು ಹೊಸಲಿಂಗಾಪೂರ ಗ್ರಾಮಸ್ತರು ಭಾಗವಹಿಸಿದ್ದರು.
೨. ಶಿವಪೂರ : ಗ್ರಾಮದಲ್ಲಿ ಲಿಂಗಪ್ಪ ತಂದೆ ಹನುಮಪ್ಪ ಮಾದಿನೂರ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಶಿವಪೂರ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಶಿವಪೂರ ಮರಿಯಪ್ಪ ಗಾಳೇಪ್ಪ ಗೋಣೆಪ್ಪ ಮತ್ತು ಊರಿನ ಜನರು ಭಾಗವಹಿಸಿದ್ದರು.
೩. ಬಸಾಪೂರ : ಗ್ರಾಮದಲ್ಲಿ ಮಿಲನ್ ಬಸಾಪೂರ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಬಸಾಪೂರ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಾಕ್ಷರಾದ ರಾಮುಲಮ್ಮ ನರಸಿಂಹಲು ಮಾನ್ವಿ ನಜೀರ ನರಸಿಂಹಯ್ಯ ಮತ್ತು ಊರಿನ ಜನರು ಭಾಗವಹಿಸಿದ್ದರು.

ರೈತರ ಒಡೆತನದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ : ಕರಡಿ ಸಂಗಣ್ಣ



ಕೋಳೂರು, ಕೊಪ್ಪಳ, ೩೦ : ಭಾರತೀಯ ಜನತಾ ಪಕ್ಷವು ಜನಪರವಾಗಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿ ಪಕ್ಷದ ಪ್ರಮುಖ ಉದ್ಧೇಶಗಳಲ್ಲೊಂದಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ಕೃಷ್ಣಾ ಬಿ. ಸ್ಕೀಂ, ಸಿಂಗಟಾಲೂರು ಏತ ನೀರಾವರಿ, ಬೆಟಗೇರಿ ಏತ ನೀರಾವರಿ ಯೋಜನೆಗಳು ಈ ಭಾಗದ ೪೦ ಸಾವಿರ ಎಕರೆ ಭೂಮಿಯನ್ನು ಸದೃಢಗೊಳಿಸಲಿವೆ. ೪೦,೦೦೦ ಎಕರೆಯಷ್ಟು ನೀರಾವರಿಯಾಗುವುದರಿಂದ ರೈತರ ಒಡೆತನದಲ್ಲಿಯೇ ಸಕ್ಕರೆ ಕಾರ್ಖಾನೆಯನ್ನು ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡುವದಾಗಿ, ಇಂತಹ ಅನೇಕ ಯೋಜನೆಗಳು ಈ ಭಾಗಕ್ಕೆ ತಲುಪುವಂತೆ ಕಾರ್ಯ ಮಾಡಲು ಮತ್ತೊಂದು ಅವಕಾಶ ಕೊಡಬೇಕೆಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ದಿ. ೩೦.೦೪.೧೩ ರಂದು ಕೊಪ್ಪಳ ಸಮೀಪದ ಕೋಳೂರು ಗ್ರಾಮದಲ್ಲಿ ಬಿ.ಜೆ.ಪಿ. ಪ್ರಚಾ


ರ ಭಾಷಣದಲ್ಲಿ ಮತ ಯಾಚನೆ ಮಾಡುತ್ತ ಈ ಮೇಲಿನಂತೆ ನುಡಿದರು. ಮುಂದುವರಿದು ಮಾತನಾಡಿದ ಅವರು ಪಟ್ಟಣ ಸಿ.ಸಿ. ರಸ್ತೆ, ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ, ರೈತರ ಸಾಲ ಮನ್ನಾ, ಮಕ್ಕಳಿಗೆ ಬಾಲ ಭವನ, ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಜಿಲ್ಲಾ ಕ್ರೀಡಾಂಗಣ, ಹೈ ಮಾಸ್ಕ್ ದೀಪಗಳು, ಹೀಗೆ ಹಲವಾರು ಪ್ರಗತಿಪರ ಕೆಲಸಗಳು ಪಾರದರ್ಶಕವಾಗಿದ್ದು, ಅಭಿವೃದ್ಧಿ ಮತ್ತು ಹಿತಕ್ಕಾಗಿ ಬಿ.ಜೆ.ಪಿ. ಬೆಂಬಲಿಸಿ ತಮಗೆ ಮತ ಹಾಕಲು ವಿನಂತಿಸಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಪೀರಾಹುಸೇನ ಹೊಸಳ್ಳಿ, ವಿರೂಪಾಕ್ಷಪ್ಪ ನವೋದಯ ಮಾತನಾಡಿ ಕರಡಿ ಸಂಗಣ್ಣನವರ ಸರ್ವಾಂಗೀಣ ಅಭಿವೃದ್ಧಿಯನ್ನು, ಜಾತ್ಯತೀತ ಮನೋಭಾವವನ್ನು ಮೆಚ್ಚಿ ಮತ ನೀಡಿ ಗೆಲ್ಲಿಸಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿಭೋಜಪ್ಪ ಕುಂಬಾರ, ನೇಮಿರೆಡ್ಡಿ ಮೇಟಿ, ನಾಗರಾಜ ಗಾರವಾಡಮಠ, ದ್ಯಾಮಣ್ಣಗೌಡ ಗುಡ್ಡದಮೇಗಳ, ಮಹಾಂತೇಶ ಪಾಟೀಲ, ಶಿವಪುತ್ರಪ್ಪ ನಿಡಶೇಷಿ, ಚಂದ್ರು ಹಲಗೇರಿ, ಕಪ್ಪತ್ತಪ್ಪ, ಬಸಣ್ಣ ಕೊಡದಾಳ, ರಾಮಣ್ಣ ಪೂಜಾರ, ಗ್ರಾ.ಪಂ. ಸದಸ್ಯರಾದ ದೇವಪ್ಪ ಮತ್ತು ರಮೇಶ, ಶಾಶ್ವತಪ್ಪ ಡೊಳ್ಳಿನ, ರಾಮಣ್ಣ ಆಂಗಡಿ, ಮಲ್ಲಪ್ಪ ಹಡಪದ, ಬಸಣ್ಣ ಜೀರರ್, ಬಸಮ್ಮ ಹೂಗಾರ್ ಮೊದಲಾದವರು ಉಪಸ್ಥಿತರಿದ್ದರು.

ಮೇ ೧ ರಂದು ಪ್ರಹ್ಲಾದ್ ಜೋಶಿ ಕೊಪ್ಪಳಕ್ಕೆ


 ಕೊಪ್ಪಳ, ೨೯ : ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರು ಮೇ ೧ ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಅವರು ಬಿ.ಜೆ.ಪಿ. ಪ್ರಚಾರ ಪ್ರಯುಕ್ತ ನಡೆಯುವ ಬಿ.ಜೆ.ಪಿ. ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಬೆಳಿಗ್ಗೆ ೧೦ ಗಂಟೆಗೆ, ಗದಗ ರಸ್ತೆಯಲ್ಲಿರುವ ಗೌರಾ ಸಿಮೆಂಟ್ಸ್ ಫ್ಯಾಕ್ಟರಿ ಆವರಣದಲ್ಲಿ ಸಭೆ ನಡೆಯಲಿದ್ದು, ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕೊಪ್ಪಳ ಜಿಲ್ಲಾ ಎಲ್ಲ ಬಿ.ಜೆ.ಪಿ. ಮುಖಂಡರು ಭಾಗವಹಿಸಲಿದ್ದಾರೆ ಎಂದು ಬಿ.ಜೆ.ಪಿ. ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.