Friday, April 12, 2013

ಜನನಾಯಕ ಕರಡಿ ಸಂಗಣ್ಣ


೨೮ ನೇ ವಯಸ್ಸಿನಲ್ಲಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿ ಎಲ್ಲಾ ಕೇತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ ಸರ್ವ ಜನಾಂಗದ ನಾಯಕ. ಅಷ್ಟೆ ಅಲ್ಲಾ ಮುಂದುವರೆದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಸಮಾಜದ ಕಟ್ಟ ಕಡೆಯಲ್ಲಿರುವ ಸಣ್ಣ ಸಣ್ಣ ಸಮುದಾಯದವರನ್ನೂ ಕೂಡಾ ಗಮನಿಸಿ ಅವರ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿರುವುದು ನಿಜಕ್ಕೂ ರಾಜಕೀಯ ರಂಗಕ್ಕೆ ವಿಸ್ಮಯವೇ ಸರಿ. ಆಡು ಮುಟ್ಟದ ಸೊಪ್ಪಿಲ್ಲ. ಸಂಗಣ್ಣನವರು ಮಾಡದಿರುವ ಅಭಿವೃದ್ಧಿ ಕಾರ್ಯಗಳೇ ಇಲ್ಲ ಎಂಬ ನಾಣ್ಣುಡಿ ಕ್ಷೇತ್ರದಲ್ಲಿ ಜನ-ಜನಿತವಾಗಿದೆ. ಜನ ಸಾಮಾನ್ಯರ ಬಗ್ಗೆ ಇವರಿಗಿರುವ ಕಾಳಜಿ, ರೈತರ ಮೇಲಿನ ವಾಮೋಹ, ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಒಯ್ಯಬೇಕೆಂಬ ಹಂಬಲ ನಿಜಕ್ಕೂ ಶ್ಲಾಘನೀಯ. ೧೯೯೪ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕರಾಗಿ ಜಯಗಳಿಸುವ ಮೂಲಕ ಈ ಕೊಪ್ಪಳ ಕ್ಷೇತ್ರ ನಿಜವಾದ ಜನ ನಾಯಕನನ್ನು ಹುಟ್ಟು ಹಾಕಿತು. ಅಂದಿನಿಂದ ಇವರ ಜನ ಪರ ಕಾರ್ಯಕ್ಕೆ ಕ್ಷೇತ್ರದ ಜನ ಆಶೀರ್ವದಿಸುತ್ತಾ ೪ ಬಾರಿ ಶಾಸಕರನ್ನಾಗಿ ಮಾಡಿರುವುದು ಅವರ ಅಭಿವೃದ್ಧಿ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶಾಸಕರಾದವರು ಇರುವುದು ಬೆಂಗಳೂರಿನಲ್ಲಿ ಅಲ್ಲ, ಕ್ಷೇತ್ರದ ಜನರ ಮಧ್ಯದಲ್ಲಿ.
                              ಅವರ ಕಷ್ಟನಷ್ಟಗಳನ್ನು ಗಮನಿಸಿ ಅವರನ್ನು ಸಂತೈಸಿ ಪರಿಹರಿಸುವ, ದಿನದ ೨೪ ಗಂಟೆಗಳಲ್ಲಿ ೧೮ ತಾಸು ಕೆಲಸ ಮಾಡಿ ಜನ ಸಾಮಾನ್ಯರ ಭವಣೆಗಳನ್ನು ದೂರ ಮಾಡಿ ಕೊಪ್ಪಳದ ಏಕೈಕ ನಾಯಕನೆಂಬ ಬಿರುದು ಕೂಡಾ ಈ ಕೇತ್ರದ ಜನತೆ ನೀಡಿರುವುದು ಸಮಂಜಸವೇ ಸರಿ. ಒಂದು ಸಣ್ಣ ಮಗುವಿನಿಂದ ಹಿಡಿದೂ ವೃದ್ಧ ವಯಸ್ಸಿನವರನ್ನೂ ಯಾರನ್ನೂ ಕೇಳಿದರೂ ಶ್ರೀ ಸಂಗಣ್ಣ ಕರಡಿ ರವರ ವ್ಯಕ್ತಿತ್ವದ ಬಗ್ಗೆ ಪಟಪಟನೆ ಹೇಳಬಲ್ಲರು ಹಾಗೂ ತುಳಿತಕ್ಕೊಳಗಾದವರಿಗೆ ಸಹಾಯಕನಾಗಿ ದೀನ ದಲಿತರ ಒಡನಾಡಿಯಾಗಿ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಕರ್ನಾಟಕ ರಾಜ್ಯದಲ್ಲಿಯೇ ಕೊಪ್ಪಳ ಕ್ಷೇತ್ರವನ್ನು ಅಭಿವೃದ್ಧಿಯ ಮೊದಲನೆಯ ಸಾಲಿನಲ್ಲಿ ನಿಲ್ಲಿಸದ ಕೀರ್ತಿ ಶ್ರೀ ಸಂಗಣ್ಣ ಕರಡಿಯವರಿಗೆ ಇದೆ. ಇವರಿಗೆ ಜನರ ಮೇಲೆ ಪ್ರೀತಿಯೇ ಹೊರತು, ಹಣದ ಮೇಲೆ ಅಲ್ಲ, ಅಭಿವೃದ್ಧಿ ಕ್ಷೇತ್ರಕ್ಕೆ ಹೊರತು ಮನೆಗಲ್ಲ ಎಂಬ  ತತ್ವದ ಆಧಾರದ ಮೇಲೆ ಇವರ ರಾಜಕೀಯ ಬದುಕು ಸಾಗಿಕೊಂಡು ಬಂದಿದೆ. ಕೊಪ್ಪಳ ಕ್ಷೇತ್ರದ ಪ್ರಶ್ನಾತೀತ ನಾಯಕನಾಗಿ ಸರ್ವ ಜನಾಂಗದವರನ್ನು ಜೊತೆಯಲ್ಲಿ ಕರೆದುಕೊಂಡು ಸರ್ವ ಕ್ಷೇತ್ರದಲ್ಲಿಯೂ ಇವರ ಮಾಡಿದ ಅಭಿವೃದ್ಧಿಯ ಒಂದು ಕಿರು ಪರಿಚಯವನ್ನು ನೀಡಲು  ಅವರ ಅಭಿಮಾನಿ ಬಳಗದವರು ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇವೆ. ಇದಲ್ಲದೇ  ಇನ್ನೂ ಅನೇಕ ಜನ ಪರ ಕಾರ್ಯಗಳು ಹಳ್ಳಿ-ಹಳ್ಳಿಗಳಲ್ಲಿ ನಡೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.


No comments:

Post a Comment