Friday, April 12, 2013

ರೈತ ಮಿತ್ರ



ಸನ್ಮಾನ್ಯ ಶಾಸಕ ಸಂಗಣ್ಣ ಕರಡಿಯವರು ಅಭಿವೃದ್ಧಿಗೊಳಿಸದ ಕ್ಷೇತ್ರ ಯಾವುದಾದರ ಇದೆಯೇ ಎಂಬ ಪ್ರಶ್ನೆಯನ್ನು  ನಮ್ಮಷ್ಟಕ್ಕೆ ನಾವೇ ಹಾಕಿಕೊಂಡಾಗ ಸಿಗುವ ಉತ್ತರ "ಇಲ್ಲ" ಎಂದು ಸ್ಪಷ್ಟವಾಗುತ್ತದೆ. ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಮತ್ತು ಮೂರೂವರೆ ದಶಕಗಳ ಹಿಂದೆ ಸ್ವತಃ ಶ್ರಮಿಜೀವಿಯಾಗಿದ್ದ ಸಂಗಣ್ಣ ಕರಡಿಯವರು ವಾಸ್ತವವಾಗಿ ಮಣ್ಣಿನ ಮಗ. ರೈತರ ಬದುಕನ್ನು ಹಸಿರಾಗಿಸಲು ಕೃಷಿ ಕ್ಷೇತ್ರಕ್ಕೆ ಪ್ರಮುಖ ಆದ್ಯತೆಯನ್ನು ತಮ್ಮ ಆಡಳಿತದಲ್ಲಿ ನೀಡಿದ್ದಾರೆ.
ಕ್ಷೇತ್ರದ ಸುಮಾರು ೩೩ ಹಳ್ಳಿಗಳು ಸೇರಿದಂತೆ ವಿವಿಧ ಗ್ರಾಮಗಳ ರೈತರಿಗೆ ಅನುಕೂಲವಾಗಲೆಂದು ಸಾವಯವ ಕೃಷಿ ಮಷಿನ್‌ಗಳಿಂದ ರೈತಾಪಿ ವರ್ಗಕ್ಕೆ ಸಹಾಯ ಧನ ನೀಡುವ ಮೂಲಕ ಎರೆಹುಳು ಘಟಕ ಮತ್ತು ಸಾವಯವ ಗೊಬ್ಬರ ತಯಾರಕ ಘಟಕಗಳನ್ನು ನಿರ್ಮಾಣ ಮಾಡಿಕೊಳ್ಳಲು ಸರಕಾರದಿಂದ ಅಪಾರ ಪ್ರಮಾಣದ ಹಣವನ್ನು ಕ್ಷೇತ್ರಕ್ಕೆ ತರಿಸಿಕೊಡುವಲ್ಲಿ ಹಾಗೂ ಕ್ಷೇತ್ರದ ರೈತಾಪಿ ವರ್ಗ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ರೈತ ರಟ್ಟೆಗೆ ಶಕ್ತಿ ತುಂಬುವಲ್ಲಿ  ಶ್ರೀ ಸಂಗಣ್ಣ ಕರಡಿಯವರು ಮಾಡಿರುವ ಸಾಧನೆ ಜನ ಮೆಚ್ಚುಗೆಯನ್ನು ಪಡೆಯದೇ ಇರಲಾರದು.

ಕೃಷಿ ಕೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು.

೨] ೨೦೧೦-೧೧ ನೇ ಸಾಲಿನ ವಿಶೇಷ ಘಟಕ ಯೋಜನೆಗೆ ಗಿರಿಜನ ಉಪಯೋಜನೆ, ಏತ
ನೀರಾವರಿ ರೂ, ೭೦ ಲಕ್ಷಗಳ ಅನುದಾನ.
೩] ಕೊಪ್ಪಳ ತಾಲೂಕಿನ ಸಿಂಗಟಾಲೂರು ಏತನೀರಾವರಿ ಯೋಜನೆ ವಿಭಾಗ ನಂ. ೧
ಮುಂಡರಗಿ ಅಡಿಯಲ್ಲಿ ಹೊಸ ವಿಭಾಗ ಪ್ರಾರಂಭಿಸಲು ಹೆಚ್ಚುವರಿ ಅನುದಾನ.
೪] ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ೧೦ ಫಲಾನುಭವಿಗಳಿಗೆ ವೈಯಕ್ತಿಕ
ಯೋಜನೆಯಡಿ ಸೌಲಭ್ಯ ಕೊಳವೆಬಾವಿಗಳ ಮಂಜೂರಾತಿಗೆ ಹೆಚ್ಚುವರಿ ಅನುದಾನ.
೫] ೨೦೦೮-೦೯ ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ೧೫ ಕೊಳವೆ
ಬಾವಿಗಳ ಮಂಜೂರಾತಿ ಹೆಚ್ಚುವರಿ ಅನುದಾನ.
೬] ತಾಲೂಕಿನ ಸಿಂದೋಗಿ, ಡಂಬರಹಳ್ಳಿ, ಬಿಸರಳ್ಳಿ, ನಿಲೋಗಿಪುರ, ಹಲವಾಗಲಿ, ಅಳವಂಡಿ,
ಕುಣಕೇರಿ, ಹ್ಯಾಟಿ, ಗೊಂಡಬಾಳ, ಮುದ್ದಾಬಳ್ಳಿ, ಕೂಕನಪಳ್ಳಿ, ಹಿಟ್ನಾಳ ಗ್ರಾಮಗಳ
ಒಟ್ಟು ೫೩ ಫಲಾನುಭವಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ
ಹೈನುಗಾರಿಕೆ ಉದ್ದೇಶಕ್ಕಾಗಿ ಹೆಚ್ಚುವರಿ ಅನುದಾನ ರೂ, ೧೭.೫೦ ಲಕ್ಷ.

ದೇಶಕ್ಕೆ ಅನ್ನ ಕೊಡುವ ರೈತನ ಜಮೀನಿಗೆ ನೀರು ಕೊಟ್ಟ  ಭಗೀರಥ ಸಂಗಣ್ಣ ಕರಡಿ.

ಒಕ್ಕಲಿಗ ಒಕ್ಕದಿದ್ದರೇ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯಂತೆ ಈ ದೇಶಕ್ಕೆ ಅನ್ನ ಕೊಡುವ ರೈತನಿಗೆ ಮಹತ್ತರ ಯೋಜನೆಯಾದ ರೈತರ ಜೀವನಾಡಿ ಅವರ ಬದುಕೆನ್ನೆಲ್ಲಾ ಹಾಗೂ ರೈತರ ಕನಸುಗಳಿಗೆ ಶಕ್ತಿಯನ್ನು ತುಂಬಿ ಹಲವಾರು ದಶಕಗಳ ಕನಸಾಗಿದ್ದ ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ಸಂಗಣ್ಣ ಕರಡಿಯವರ ಬದುಕಿನಲ್ಲಿ ಒಂದು ಮೈಲುಗಲ್ಲೆಂದೇ ಹೇಳಬಹುದು. ಎಲ್ಲಾ ಕೆಲಸಗಳಿಗಿಂತಲೂ ಅವರಿಗೆ ಅತ್ಯಂತ ತೃಪ್ತಿ ಕೊಟ್ಟ ಕೆಲಸ ರೈತರ ಜಮೀನುಗಳಿಗೆ ನೀರು ತರಿಸಿದ್ದು. ಅದಕ್ಕಾಗಿ ಅವರು ನೂರಾರು ಹೋರಾಟಗಳನ್ನು ವಿರೋಧ ಪಕ್ಷದ ಶಾಸಕರಾಗಿದ್ದಾಗ ಮಾಡಿರುವುದು ಇಡೀ ಕೊಪ್ಪಳದ ಕ್ಷೇತ್ರ ಜನತೆ ಕಣ್ಣಾರೆ ನೋಡಿದ್ದಾರೆ. ಅವರ ಹೋರಾಟಕ್ಕೆ ಫಲವೆಂಬಂತೆ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ ಮೇಲೆ ಆಡಳಿತ ಸರಕಾರವನ್ನು ರೈತರ ಕನಸುಗಳನ್ನು ಸಾಕಾರಗೊಳಿಸಲು ಸಂಗಣ್ಣ ಕರಡಿಯವರು ಪಟ್ಟ ಶ್ರಮ ಅಷ್ಟಷ್ಟಲ್ಲಾ. ನೀರಾವರಿ ಯೋಜನೆಗೆ ಚಾಲನೆ ಕೊಡಲು ನೀರಾವರಿ ಇಲಾಖೆಗೆ ಅನೇಕ ಬಾರಿ ಅಲೆದಾಡಿ ಈ ಯೋಜನೆಯನ್ನು ಅತ್ಯಂತ ಆಸಕ್ತಿವಹಿಸಿ ಕೊಪ್ಪಳ ಕ್ಷೇತ್ರಕ್ಕೆ ಮಂಜೂರು ಮಾಡಿಕೊಟ್ಟ ಮತ್ತು ೧೭ ಕಿ.ಮೀ. ಸಿಂಗಟಾಲೂರ ಮುಖ್ಯ ಕಾಲುವೆಯನ್ನು ನಿರ್ಮಾಣ ಮಾಡಲು ಹಣವನ್ನು ಬಿಡುಗಡೆಗೊಳಿಸಿದ ಸನ್ಮಾನ್ಯ ಭಾರಿ ನೀರಾವರಿ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿರವರನ್ನು ಕೂಡಾ ಸಂಗಣ್ಣನವರು ಬಹಳ ನನೆಯುತ್ತಾರೆ. ಅಲ್ಲದೇ ಮಂತ್ರಿಗಳನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ರವರಿಗೆ ಒತ್ತಾಯ ತಂದು ಛಲ-ಬಿಡದೇ ರೈತರ ಜಮೀನುಗಳಿಗೆ ನೀರು ಕೊಟ್ಟು ಈ ಕ್ಷೇತ್ರ ರೈತರು ತಮ್ಮನ್ನು ಎಂದೆಂದಿಗೂ ಮರೆಯದೇ ಹಾಗೆ ರೈತರಿಗೊಂದು ದೊಡ್ಡ ಕೊಡುಗೆಯನ್ನು ನೀಡಿರುವುದು ಸಂಗಣ್ಣ ಕರಡಿಯವರು ರೈತರ ಮೇಲೆ ಇಟ್ಟ ಪ್ರೀತಿಗೆ ಇದೋಂದು ಜ್ವಲಂತ ಸಾಕ್ಷಿ. ಈ ಯೋಜನೆಯ ಸಕಾಲದಿಂದ ೪೦ ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಬಂದಿರುವುದು ಆ ಭಾಗದ ಜನ ಸಂಗಣ್ಣ ಕರಡಿಯವರನ್ನು ಎಂದಿಗೂ ಮರೆಯಲಾರರು. ಇದಲ್ಲದೇ ಬೆಟಗೇರಿ ಗ್ರಾಮಕ್ಕೆ ಹಾಗೂ ಅಳವಂಡಿ ಮತ್ತು ಬಹದ್ದೂರಬಂಡಿ ಏತ ನೀರಾವರಿಗೆ ಚಾಲನೆ ನೀಡಿರುವುದು ರೈತ ಸಮುದಾಯಕ್ಕೆ ಕೊಟ್ಟ ದೊಡ್ಡ ಕೊಡುಗೆ. ಅದಲ್ಲದೇ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿಯಲ್ಲಿ ಸುಮಾರು ೩ ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ, ಚರಂಡಿ ಮತ್ತು ಸಮುದಾಯ ಭವನಗಳ ನಿರ್ಮಾಣ ಮಾಡಿ, ಕೊಪ್ಪಳ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಖೆಯನ್ನು ಪ್ರಾರಂಭಿಸಿದ  ರೈತ ನಾಯಕ.



೧. ಸಿಂಗಟಾಲೂರು ಏತನೀರಾವರಿ ಯೋಜನೆಗೆ ಚಾಲನೆ ಬರದಿಂದ ಕಾಲುವೆಗಳ ನಿರ್ಮಾಣ
ಪ್ರಗತಿ
೨. ಸಿಂಗಟಾಲೂರು ಏತನೀರಾವರಿ ಯೋಜನೆಯಡಿಯಲ್ಲಿ ಸುಮಾರು ೩ ಕೋಟಿ ವೆಚ್ಚದಲ್ಲಿ
ಸಿ.ಸಿ. ರಸ್ತೆ, ಚರಂಡಿ ಮತ್ತು ಸಮುದಾಯ ಭವನ ನಿರ್ಮಾಣ.
೩. ಬೆಟಗೇರಿ ಬಹದ್ದೂರುಬಂಡಿ ಏತನೀರಾವರಿ ಯೋಜನೆಗಳ ಸರ್ವೆ ಕಾರ್ಯಕ್ಕೆ ಚಾಲನೆ.
೪. ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ೪೦ ಕೋಟಿ, ಒಟ್ಟು ೧೧ ಕಿ.ಮೀ.
೫. ಎಸ್.ಸಿ.ಪಿ. ಯೋಜನೆಯಡಿ ಏತನೀರಾವರಿ ಕಾಸನಕಂಡಿ ಮತ್ತು ಕರ್ಕಿಹಳ್ಳಿ ತಲಾ ೧
ಕೋಟಿ.
೬. ಈಗಾಗಲೇ ಚಾಲನೆಯಲ್ಲಿರುವ ಏತನೀರಾವರಿ : ನೀರಲಗಿ ಮತ್ತು ಚಿಕ್ಕಬಗನಾಳ.

No comments:

Post a Comment