Friday, April 12, 2013

ದಲಿತ ಸಮುದಾಯ ಹಾಗೂ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸಂಗಣ್ಣ ಕರಡಿಯವರ ಕೊಡುಗೆಗಳು


ಮಹಾ ಮಾನವತಾವಾದಿ ಈ ದೇಶಕ್ಕೆ ಹೊಸ ದಿಕ್ಕನ್ನು ತೋರಿಸಿದ ಸರ್ವರಲ್ಲಿ ಸಮಪಾಲು  ಸಮಬಾಳು ಎಂಬ ಸಂದೇಶವನ್ನು ನೀಡಿದ ಡಾ. ಬಿ.ಆರ್. ಅಂಬೇಡ್ಕರವರ ಆಶಯದಂತೆ ಹಾಗೂ ಶ್ರಮ ಮತ್ತು ಸಾರ್ಥಕತೆಯಿಂದ ಸಮಾಜದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನು ಕಾಣಬಹುದು ಎಂಬ ವಾಲ್ಕಿಕಿ ಮಹರ್ಷಿಗಳ ಸಂದೇಶದಂತೆ ಆ ಜಾತಿಜನಾಂಗಕ್ಕೆ ಸಂಗಣ್ಣ ಕರಡಿಯವರು ಕೊಟ್ಟ ಕೊಡುಗೆ ಅಪಾರವಾದದ್ದು. ಇದರ ಮೂಲಕ ಸಮಾಜಿಕ ನ್ಯಾಯ ಹಾಗೂ ಜಾತ್ಯಾತೀತ ನೆಲೆಗಟ್ಟನ್ನು ಆ ಜನಾಂಗಕ್ಕೆ ಅವರು ಕೊಟ್ಟಿರುವುದು ಆ ಸಮಾಜದ ಎಲ್ಲಾ ಹಿರಿಯ-ಕಿರಿಯ ಬಂಧುಗಳು ಇವರ ಮೇಲೆ ಅಪಾರ ಅಭಿಮಾನ ಹೊಂದಿರುವುದು ಕಂಡು ಬರುತ್ತದೆ. ಇವರ ಆರ್ಥಿಕ ಬದುಕನ್ನು ಬಲಗೊಳಿಸುವ ನಿಟ್ಟಿನಲ್ಲಿ ಅನೇಕ ಹಳ್ಳಿಗಳಲ್ಲಿ ಕೊಳುವೆ ಬಾವಿಗಳನ್ನು ಕೊರೆಯಿಸಿ, ಜಮೀನಿಗೆ ನೀರು ಕೊಟ್ಟು ಅವರ ಬದುಕನ್ನು ಕಟ್ಟಿ ಕೊಡುವ ಸಂಗಣ್ಣ ಕರಡಿಯವರ ಪ್ರಮಾಣಿಕ ಪ್ರಯತ್ನಕ್ಕೆ ಅಭಿನಂದನೆ ಸಲ್ಲಲೇ ಬೇಕು, ಅದಲ್ಲದೇ ಸಮಾಜ ಕಲ್ಯಾಣ ಹಾಗೂ ಬಂಧಿಖಾನೆ ಸಚಿವರಾದ ಶ್ರೀಯುತ ನಾರಾಯಣಸ್ವಾಮಿ ರವರನ್ನು ಕೂಡಾ ಈ ಕ್ಷೇತ್ರದ ಜನತೆಯ ಪರವಾಗಿ ಸಂಗಣ್ಣ ಕರಡಿಯವರು ಸ್ಮರಿಸುತ್ತಾರೆ. ಪರಿಶಿಷ್ಟ  ಜಾತಿ ಜನಾಂಗದ ಕಾಲೋನಿಗಳಿಗೆ

ಕುಡಿಯುವ ನೀರು ಸಾರ್ವಾಜನಿಕ ಶೌಚಾಲಯ, ಚರಂಡಿಗಳ ಅಭಿವೃದ್ಧಿ ಬೀದಿ ದೀಪಗಳು, ಕಾಂಕ್ರೇಟ ರಸ್ತೆಗಳು ಹಾಗೂ ಇದೇ ಯೋಜನೆಯನ್ನು ಪರಿಶಿಷ್ಟ ಪಂಗಡದ ಜನಾಂಗದವರಿಗೆ ವಿಸ್ತರಿಸುವ ಮೂಲಕ ಅಭಿವೃದ್ಧಿಯ ಕನಸು ಕಾಣುವ ಆ ಸಮಾಜಗಳಿಗೆ ಅಭಿವೃದ್ಧಿಯ ಮೂಲಕ ಆ ಜನಾಂಗದ ಪ್ರೀತಿ ಗಳಿಸಿಕೊಂಡವರು ಸಂಗಣ್ಣ ಕರಡಿಯವರು. ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನದ ತಿರುಳನ್ನು ಅರ್ಥ ಮಾಡಿಕೊಂಡ ಇವರು ಎಲ್ಲಾ ಜಾತಿ-ಜನಾಂಗದವರನ್ನು ಸಹೋದರರಂತೆ ಕಾಣುವ ಇವರ ವಿಶಿಷ್ಟ  ವ್ಯಕ್ತಿತ್ವ ಕ್ಷೇತ್ರದ ಜನರನ್ನು ಆಕರ್ಷಿಸುತ್ತಿದೆ ಎಂದರೂ ತಪ್ಪಾಗಿಲಿಕ್ಕಿಲ್ಲ.



ಕೈಗೊಂಡಿರುವ ಕಾಮಗಾರಿಗಳ ವಿವರ:-
೧. ೨೦೦೮-೦೯ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಅಭಿವೃದ್ಧಿ ನಿಗಮದಿಂದ ಬಿಸರಳ್ಳಿ, ಕುಣಿಕೇರಿ ತಾಂಡಾ, ಹಲವಾಗಲಿ, ಕೊಪ್ಪಳ, ಹಂದ್ರಾಳ, ಅಗಳಕೇರಾ, ಬೇಳೂರು, ಕಲಿಕೇರಿ, ಕುಣಿಕೇರಿ, ಹನಕುಂಟಿ, ಓಜನಹಳ್ಳಿ ಮುನಿರಾಬಾದ, ಭಾಗ್ಯನಗರದಲ್ಲಿ ೧೫ ಕೊಳವೆ ಬಾವಿಗಳನ್ನು ಫಲಾಪೇಕ್ಷೆಗಳಿಗೆ ಮಂಜೂರು ಮಾಡಲಾಗಿದ್ದು.
೨. ಪರಿಶಿಷ್ಟ ವರ್ಗದ ಕಾಲೋನಿಗಳಿಗೆ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಚರಂಡಿಗಳ ಅಭಿವೃದ್ಧಿ, ಬೀದಿದೀಪಗಳು, ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ರೂ.
೧೫ ಲಕ್ಷ ಅನುದಾನ ಪಡೆದು ಯೋಜನೆ ಜಾರಿಗೊಳಿಸಲಾಗಿದೆ.
೩. ೨೦೧೧-೧೨ನೇ ಸಾಲಿಗೆ ಪರಿಶಿಷ್ಟ  ವರ್ಗದ ಕಾಲೋನಿಗಳಿಗೆ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಚರಂಡಿಗಳ ಅಭಿವೃದ್ಧಿ, ಬೀದಿ ದೀಪಗಳು, ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ರೂ. ೫೦ ಲಕ್ಷ ಅನುದಾನ ಪಡೆದು ಯೋಜನೆ ಜಾರಿಗೊಳಿಸಲಾಗಿದೆ.
೪. ೨೦೧೧-೧೨ನೇ ಸಾಲಿನಲ್ಲಿ ರೂ. ೪೦ ಲಕ್ಷಗಳ ಅನುದಾನದಲ್ಲಿ ಹಿಂದುಳಿದ ವರ್ಗದವರಿಗೆ
೪ ಸಮುದಾಯ ಭವನಗಳ ನಿರ್ಮಾಣ.
೫. ೨೦೧೧-೧೨ನೇ ಸಾಲಿನಲ್ಲಿ ರೂ. ೯೦ ಲಕ್ಷಗಳ ಅನುದಾನದಲ್ಲಿ ಪರಿಶಿಷ್ಟ  ಜಾತಿ ವರ್ಗದವರಿಗೆ
೯ ಸಮುದಾಯ ಭವನಗಳ ನಿರ್ಮಾಣ.
೬. ೨೦೧೧-೧೨ನೇ ಸಾಲಿನಲ್ಲಿ ರೂ. ೧೪೩ ಲಕ್ಷಗಳ ಅನುದಾನದಲ್ಲಿ ಹಿಂದುಳಿದ ವರ್ಗದವರಿಗೆ
ಸಂಬಂಧಿಸಿದಂತೆ ವಿವಿಧ ಗ್ರಾಮದಲ್ಲಿ ೧೫ ಸಮುದಾಯ ಭವನಗಳ ನಿರ್ಮಾಣ.
೭. ೨೦೧೧-೧೨ನೇ ಸಾಲಿನಲ್ಲಿ ಕೊಪ್ಪಳ ತಾಲೂಕಿನ ಪರಿಶಿಷ್ಟ ಪಂಗಡದ ೧೦೦ ಫಲಾನುಭವಿಗಳಿಗೆ
ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ೫೦ ಕೊಳವೆಬಾವಿಗಳನ್ನು ಕೊರೆಯಲು

ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದು.

೮. ೨೦೦೯-೧೦ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದವರಿಗೆ ಮೂಲಭೂತ ಸೌಲಭ್ಯ ಒದಗಿಸಲು ರೂ. ೬೦ ಲಕ್ಷಗಳ ಹೆಚ್ಚುವರಿ ಅನುದಾನ.
೯. ಎಸ್.ಸಿ. ಎಸ್.ಟಿ. ಮತ್ತು ಬಿ.ಸಿ.ಎಂ. ಇಲಾಖೆಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ
ಸುಮಾರು ೧೦೦೦ ಫಲಾನುಭವಿಗಳು.

No comments:

Post a Comment