Saturday, April 13, 2013

ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ಕ್ರಾಂತಿ ಮಾಡಿದ ಕಾರ್ಮಿಕ ಬಂಧು


ಈಗಾಗಲೇ ಕೊಪ್ಪಳ ಜಿಲ್ಲೆ ಕೈಗಾರಿಕಾ ನಗರವೆಂದು ಕರ್ನಾಟಕ ರಾಜ್ಯದಲ್ಲೇ ಪ್ರಸಿದ್ಧಿಯಾಗಿದ್ದು, ದೊಡ್ಡ ಕೈಗಾರಿಕೆಗಳು ಪ್ರಾರಂಭವಾಗಿವೆ. ಅದಲ್ಲದೇ ಆರ್ಥಿಕವಾಗಿ ಹಿಂದುಳಿದಿರುವಂತಹ ಕಾರ್ಮಿಕ ಬಂಧುಗಳಿಗೆ ಸ್ವತಂತ್ರವಾಗಿ ಸಣ್ಣ-ಸಣ್ಣ ಕೈಗಾರಿಕೆಗಳನ್ನು ನಡೆಸುವ ದೃಷ್ಟಿಯಿಂದ ಸಂಗಣ್ಣನವರು ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ (ಕೆ.ಎಸ್.ಎಸ್.ಐ.ಡಿ.ಸಿ) ಅಧ್ಯಕ್ಷರಾದ ಸಂದರ್ಭದಲ್ಲಿ ಎಲ್ಲಾ ಕಾರ್ಮಿಕ ಬಂಧುಗಳ ಹಿತ ದೃಷ್ಟಿಯಿಂದ ವಸಾಹತು ಸ್ಥಾಪನೆಗೆ ಬಸಾಪುರದ ಹತ್ತಿರ ೧೦೪ ಎಕರೆ ಜಮೀನು ಖರೀದಿ ಮಾಡಿದ್ದು, ಸಧ್ಯದಲ್ಲಿಯೇ ಗುಡಿ ಕೈಗಾರಿಕೆಗಳಿಗೆ ನಿವೇಶನಗಳನ್ನು ಹಾಗೂ ಮಳಿಗೆಗಳನ್ನು ನಿರ್ಮಾಣ ಮಾಡಿ ವಸಾಹತು ಕೈಗಾರಿಕೆಗಳ ಸ್ಥಾಪನೆಗೆ ಒಂದು ದಿಟ್ಟ  ಹೆಜ್ಜೆಯನ್ನು ಇಟ್ಟಿರುವುದು ಕಾರ್ಮಿಕ ಬಂಧುಗಳಿಗೆ ನೆಲೆಗಟ್ಟನ್ನು ಕೊಟ್ಟು ಅನೇಕ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಕಾರಣೀಭೂತರಾದ ಸಂಗಣ್ಣ ಕರಡಿಯವರ ಶ್ರಮ ಅಪಾರವಾದದ್ದು. ಇನ್ನು ಮುಂದೆ ಕೊಪ್ಪಳದಲ್ಲಿ ಸಣ್ಣ ಕೈಗಾರಿಕೆಗಳ ಕ್ರಾಂತಿ ಹಾಗೂ ಕಾರ್ಮಿಕ ಬಂಧುಗಳ ಆರ್ಥಿಕ ಸುಧಾರಣೆಯಿಂದ ಅವರವರ ಬದುಕನ್ನು ಕಟ್ಟಿಕೊಳ್ಳುವ ಕಾಯಕಕ್ಕೆ ಸದಾ ಟೊಂಕ ಕಟ್ಟಿ ನಿಂತಿರುವ ಮಹಾ ನಾಯಕ ಸಂಗಣ್ಣ ಕರಡಿಯವರ ಸಾಧನೆಯನ್ನು ಎಳೆ-ಎಳೆಯಾಗಿ ಹೇಳುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿದ್ದೇವೆ. ಅಲ್ಲದೇ ಈ ಯೋಜನೆಯ ಮಂಜೂರಾತಿಗಾಗಿ ಸಹಕರಿಸಿದ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ರಾಜುಗೌಡ ರವರನ್ನು ಕೂಡಾ ಸಂಗಣ್ಣ ಕರಡಿಯವರು ತುಂಬು ಹೃದಯದಿಂದ ಸ್ಮರಸಿಕೊಳ್ಳುತ್ತಾರೆ. ಕೊಪ್ಪಳದಲ್ಲಿರುವ ಅಸಂಖ್ಯಾತ ಕಾರ್ಮಿಕ ಬಂಧುಗಳು ತಮ್ಮ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನವನ್ನು ಸ್ವತಂತ್ರವಾಗಿ ನಡೆಯಿಸಿಕೊಂಡು ಹೋಗಲು ನೆರವು ನೀಡಿದ ನೆಚ್ಚಿನ ನಾಯಕನನ್ನು ತುಂಬು ಹೃದಯದಿಂದ ನೆನೆಯುತ್ತಾರೆ. ಕಾರಣ ಅಲ್ಲೊಂದು ಇಲ್ಲೊಂದು ವರ್ಕಶಾಪಗಳು ಇರುವುದಕ್ಕಿಂತ ಒಂದೇ ಹತ್ತಿರ ಎಲ್ಲಾ ಗುಡಿ ಕೈಗಾರಿಕೆಗಳು ಇರುವುದರಿಂದ ಸಾರ್ವಜನಿಕರಿಗೂ ಕೂಡಾ ಸಮಯದ ವ್ಯಯ ತಪ್ಪುವುದರ ಜೊತೆಗೆ ಅನೂಕೂಲವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಸ್ವತಂತ್ರ ಜೀವನ ಮಾಡುವುದು ಸುಗಮವಾಗುವುದು.

No comments:

Post a Comment