Friday, April 12, 2013

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಸಾಕಾರ.


ಭಾರತ ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಕ್ಷೇತ್ರದಲ್ಲಿ ಸಾಕಾರಗೊಳಿಸುವಲ್ಲಿ ಶಾಸಕ ಸಂಗಣ್ಣನವರು ಯಶಸ್ವಿಯಾಗಿದ್ದಾರೆ. ಹಳ್ಳಿ-ಹಳ್ಳಿಗಳ ಕುಂದುಕೊರತೆಗಳನ್ನು ತಿಳಿದುಕೊಳ್ಳುವುದಕ್ಕಾಗಿ ಶಾಸಕರು ಪ್ರತಿದಿನ ಶ್ರಮಿಸುತ್ತಿರುವುದು ತಮ್ಮೆಲ್ಲರ ಅನುಭವಕ್ಕೆ ಬಂದ ವಿಷಯವೇ ಆಗಿದೆ. ಸಂಗಣ್ಣನವರು ಮೂಲತಃ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬದುಕು ರೂಪಿಸಿಕೊಂಡವರು. ಗ್ರಾಮಗಳು ಮತ್ತು ಗ್ರಾಮೀಣ ಭಾಗದ ಜನತೆ ಅವರ ಉಸಿರು, ಪ್ರಾಣ, ಜೀವಮಿಡಿತಗಳಾಗಿದ್ದಾರೆ ಎಂಬುದು ಅತಿಶಯೋಕ್ತಿಯ ಮಾತಲ್ಲ. 


ಸಂಗಣ್ಣನವರನ್ನು ಹತ್ತಿರದಿಂದ ಬಲ್ಲವರಿಗೆ ವೇದ್ಯವಾಗಿರುವ ವಿಷಯ. ಕ್ಷೇತ್ರದಲ್ಲಿದ್ದಾಗ ನಿತ್ಯ- ಪ್ರತಿನಿತ್ಯ ಒಂದಿಲ್ಲೊಂದು ಹಳ್ಳಿಗೆ ಅವರು ಭೇಟಿ ನೀಡುತ್ತಲೇ ಇರುವುದು, ಗ್ರಾಮೀಣ ಬದುಕಿನ ಬಗ್ಗೆ ಅವರು ಪ್ರೀತಿ ಹೊಂದಿರುವುದನ್ನು ಸ್ಪಷ್ಟಗೊಳಿಸುತ್ತದೆ. ಆ ನಿಟ್ಟಿನಲ್ಲಿ ಅವರು ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಕ್ಷೇತ್ರದ ೪೧ ಕ್ಕೂ ಹೆಚ್ಚು ಗ್ರಾಮಗಳನ್ನು ಸುವರ್ಣಗ್ರಾಮ ಯೋಜನೆಯಡಿಯಲ್ಲಿಯ ಅನುದಾನದಿಂದ ಸಮಗ್ರವಾಗಿ ಅಭಿವೃದ್ಧಿಗೊಳಿಸಿರುತ್ತಾರೆ. ಈ ಕಾಳಜಿಯನ್ನು ನೋಡಿದರೆ ಹಳ್ಳಿಗಳಿಂದಲೇ ದಿಲ್ಲಿ ಎನ್ನುವ ಗಾಂಧಿಜಿಯವರ ಕನಸಿನ ಸ್ವರಾಜ್ಯ ಗ್ರಾಮ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಈ ಯೋಜನೆಯಿಂದ ಮೇಲ್ಕಾಣಿಸಿದ ಹಳ್ಳಿಗಳಿಗೆ ಸುಸಜ್ಜಿತ ಸಿಮೆಂಟ್ ರಸ್ತೆ ಹಾಗೂ ವ್ಯವಸ್ಥಿತ ಚರಂಡಿಗಳು, ಅಂಗನವಾಡಿ ಕಟ್ಟಡಗಳು ಹಾಗೂ ಸಮುದಾಯ ಭವನಗಳು ರೂಪಗೊಂಡಿರುವುದು ಎಲ್ಲಾ ವರ್ಗದ ಜನರಿಗೂ ಕೂಡಾ ಅತ್ಯಂತ ಉಪಯೋಗಕರವಾದ ಅಭಿವೃದ್ಧಿಕರವಾಗಿದೆ. ಹಳ್ಳಿಗಳ ಅಭಿವೃದ್ಧಿಯನ್ನು ಮಾಡುವ ಮುಖಾಂತರ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಮೂಲಭೂತ ಸೌಕರ್ಯ ಪಡೆದುಕೊಳ್ಳುವುದು ನಮ್ಮ ಜನ್ಮ ಸಿದ್ಧ ಹಕ್ಕು ಎನ್ನುವದನ್ನ ಸಂಗಣ್ಣ ಕರಡಿಯವರು ಗ್ರಾಮೀಣ ಪ್ರದೇಶದ ಜನರಿಗೆ ಮಾಡಿ ತೋರಿಸಿದ್ದಾರೆ.

No comments:

Post a Comment