Saturday, April 13, 2013

ಕೊಪ್ಪಳ ನಗರದ ಅಭಿವೃದ್ಧಿಗೆ ಮುನ್ನುಡಿ ಬರೆದ ಕರಡಿ ಸಂಗಣ್ಣ





"ಕೊಪ್ಪಳ"ವು ಜಿಲ್ಲಾ ಸ್ಥಳವಾಗಿ ಘೋಷಣೆಯಾಗಿದ್ದು ಸಂಗಣ್ಣನವರು ಶಾಸಕರಾಗಿದ್ದ ಅವಧಿಯಲ್ಲಿಯೇ ಎನ್ನುವುದು ಈಗ ಇತಿಹಾಸ. ಕಳೆದ ೧೫ ವರ್ಷಗಳಲ್ಲಿ ಕೊಪ್ಪಳ ನಗರವು ಕುಡಿಯುವ ನೀರಿನ ಸಮಸ್ಯೆಯಿಂದ ಎಂದೂ ಬಳಲಿಲ್ಲ. ಗ್ರಾಮೀಣ ಭಾಗದ ಜನತೆಯ ಬದುಕನ್ನು ಹಸನಾಗಿಸಲು ಪ್ರಯತ್ನಪಟ್ಟಷ್ಟೆ  ಸಂಗಣ್ಣನವರು ಕೊಪ್ಪಳ ನಗರದ ಅಭಿವೃದ್ಧಿಗೂ ಅಷ್ಟೆ ಪ್ರಾಮುಖ್ಯತೆ ನೀಡಿದ್ದಾರೆ. 
ಕೊಪ್ಪಳ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದು, ಕೈಗೊಂಡ  ಅಭಿವೃದ್ಧಿ ಕ್ರಾಂತಿಯನ್ನು ಕಂಡು ಕ್ಷೇತ್ರದ ಜನರು ಸಂತಸಪಡುತ್ತಿರುವ ದೃಶ್ಯ ಕ್ಷೇತ್ರದಲ್ಲಿ ಕಂಡು ಬರುತ್ತದೆ. ಕೊಪ್ಪಳಕ್ಕೆ ದ್ವಿಪಥ ರಸ್ತೆ, ಸರ್ಕಲ್‌ಗಳ ಅಭಿವೃದ್ಧಿ, ನಗರ ಉದ್ಯಾನವನ, ಸುಸಜ್ಜಿತ ಕೇಂದ್ರೀಯ ಬಸ್ ನಿಲ್ದಾಣ, ಕೊಪ್ಪಳಕ್ಕೆ ಕಿರೀಟವಿಟ್ಟಂತೆ ನಳನಳಿಸುವ ಪ್ರವಾಸಿ ಮಂದಿರ, ೨೫೦ ಹಾಸಿಗೆಯ ಸುಸಜ್ಜಿತ ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಅಟಲಬಿಹಾರಿ ವಾಜಪೇಯಿ ವಸತಿ ಶಾಲೆ ಈ ರೀತಿಯಾದಂತಹ ಅಭಿವೃದ್ಧಿ ಕಾರ್ಯಗಳು ಜಾರಿಯಾಗಿರುವದನ್ನು ನೋಡಿದಾಗ ಸಂಗಣ್ಣ ಕರಡಿಯಂತಹ ನಾಯಕರುಗಳು ಕೊಪ್ಪಳ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದಂತದ್ದು. ಅವರು ಎಂದೂ ಮತಗಳಿಕೆಗೆ ವಿಚಾರ ಮಾಡಿದವರಲ್ಲ. ಅಭಿವೃದ್ಧಿ ಕೆಲಸ ಕಾರ್ಯಗಳ ಮೂಲಕ ಟೀಕಾಕಾರರಿಗೆ ಉತ್ತರ ಹೇಳಿದ ಒಬ್ಬ ಧೀಮಂತ ನಾಯಕ, ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕೈ ಆಡಿಸಿ ಕೆಲಸ ಮಾಡಿದ ಅನುಭವಿ ನಾಯಕ ಸಂಗಣ್ಣ ಕರಡಿ ಎಂಬುದು ಇಡೀ ಕ್ಷೇತ್ರದ ಜನತೆಗೆ ಗೊತ್ತು.



No comments:

Post a Comment