Friday, April 12, 2013

ಕೊಪ್ಪಳ ಕ್ಷೇತ್ರವನ್ನು ಶೈಕ್ಷಣಿಕ ಕ್ರಾಂತಿಯತ್ತ ಕೊಂಡೊಯ್ದ ಮಹಾ ನಾಯಕ



ಶೈಕ್ಷಣಿಕವಾಗಿ ಪದವೀಧರರಲ್ಲದಿದ್ದರೂ ಬದುಕಿನ ಕುಲುಮೆಯಲ್ಲಿ ಬೆಂದು ಸಾರ್ವಜನಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಆಡಳಿತದ ದೀರ್ಘ ಅನುಭವ ಹೊಂದಿರುವ ಕರಡಿ ಸಂಗಣ್ಣನವರು ಸದಾ ಅಧ್ಯಯನಶೀಲರು.
 ಪುಸ್ತಕ ಸದಾ ಇವರ ಸಂಗಾತಿ. ಅಪಾರ ಶಿಕ್ಷಣ ಪ್ರೇಮಿಗಳಾಗಿರುವ ಶ್ರೀ ಸಂಗಣ್ಣನವರು ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಮತ್ತು ಕೊಪ್ಪಳ ನಗರದಲ್ಲಿ ಪ್ರಾಥಮಿಕ,
ಪ್ರೌಢ ಮತ್ತು ಉನ್ನತ ಶಿಕ್ಷಣವು   ಪ್ರತಿಯೊಬ್ಬರಿಗೂ ಲಭಿಸಲೆಂದು ಸುಮಾರು ೮.೪೬ ಕೋಟಿ ಅನುದಾನವನ್ನು ವಿವಿಧ ಹಂತಗಳಲ್ಲಿ ಶಿಕ್ಷಣದ ಯಶಸ್ವಿ ಅನುಷ್ಠಾನಕ್ಕಾಗಿ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದಾರೆ. ಅದಲ್ಲದೇ ಕೊಪ್ಪಳ ಕ್ಷೇತ್ರದ ಜನತೆಯ ೩ ದಶಕಗಳ ಕನಸಾದ ಈ ಜಿಲ್ಲೆಗೆ ಒಂದು ಮುಕುಟವಿದ್ದಂತೆ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿರುವುದು ಇವರ ಶಿಕ್ಷಣದ ಬಗೆಗೆ ಇರುವ ತುಡಿತ ಮತ್ತು ಜನಪರ ಕಾಳಜಿ, ನಾನು ಶಿಕ್ಷಣದಿಂದ ವಂಚಿತನಾದೆ ಆದರೆ ನನ್ನ ಕ್ಷೇತ್ರದ ಜನ ಅದರಲ್ಲೂ ಗ್ರಾಮೀಣ ಪ್ರದೇಶ ರೈತರ ಮಕ್ಕಳು ಉನ್ನತ ವ್ಯಾಸಂಗವನ್ನು ಪಡೆದುಕೊಳ್ಳಲಿ ನನ್ನಂತೆ ಅವರು ಶಿಕ್ಷಣದಿಂದ ವಂಚಿತರಾಗುವುದು ಬೇಡ ವೈದ್ಯಕೀಯ ಕಾಲೇಜಿನ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯನ್ನ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿಯನ್ನು ತೆಗೆದೊಗೆದು ಮುಂದುವರೆದ ಜಿಲ್ಲೆಗಳ ಸಾಲಿಗೆ ಸೇರಿಸಿರುವುದು ಒಂದು ಶೈಕ್ಷಣಿಕ ಕ್ರಾಂತಿಯೇ ಸರಿ. ಹಾಗೂ ಇದಲ್ಲದೇ ಕೊಪ್ಪಳ ನಗರಕ್ಕೆ ತೋಟಗಾರಿಕಾ ಡಿಪ್ಲೋಮಾ ಕಾಲೇಜ್, ಕೃಷಿ ಕಾಲೇಜನಂತಹ ವೈಜ್ಞಾನಿಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ ಸಂಗಣ್ಣ ಕರಡಿಯವರ ಹೆಸರು ಅಜರಾಮರವಾಗಿ ಉಳಿಯಬಲ್ಲದು ಎಂಬ ಕ್ಷೇತ್ರ ಜನರ ಅನಿಸಿಕೆ.


 ಈಗಾಗಲೇ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಇಂಜನೀಯರ ಕಾಲೇಜ ಇದ್ದರೂ ಕೂಡಾ ಕೊಪ್ಪಳ ವಿಧಾನ ಸಭಾ ಕ್ಷೇತ್ರಕ್ಕೊಂದು ಇಂಜನೀಯರಿಂಗ್ ಕಾಲೇಜ ಬೇಕೆ-ಬೇಕೆಂದು ಹಟ ಮಾಡಿ, ಪಟ್ಟು ಬಿಡದೇ ಇಂಜನೀಯರಿಂಗ್  ಕಾಲೇಜ ಮಂಜೂರು ಮಾಡಿಸಿದರು. ಇದೊಂದು ಶೈಕ್ಷಣಿಕ ದಾಖಲೆ ಎನ್ನಬಹುದು. ಈ ಮಂಜೂರಾತಿಗಾಗಿ ಶ್ರಮಿಸಿದ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದಂತಹ ಸನ್ಮಾನ್ಯ ಶ್ರೀ ಮುರಗೇಶ ನಿರಾಣಿ ರವರನ್ನು ಕೂಡಾ ಸಂಗಣ್ಣನವರು ಅಭಿನಂದಿಸಿದ್ದಾರೆ. ಇದಕ್ಕಾಗಿ ಕನಸುಹೊತ್ತ ವಿದ್ಯಾರ್ಥಿಗಳು  ಪ್ರಗತಿಯನ್ನು ಕಣ್ಣುಗಳಲ್ಲಿ ಕಾಣುವಂತಹ ಪ್ರಜ್ಞಾವಂತರು, ಚಿಂತಕರು, ಸಾಹಿತಿಗಳು ಹಾಗೂ ಬುದ್ಧಿ ಜೀವಿಗಳು ಸಂಗಣ್ಣ ನವರ ಶೈಕ್ಷಣಿಕ ಕಾಳಜಿಯನ್ನು ಎಂದೂ ಮರೆಯಲಾರರು.


ಇಂತಹ ವರ್ಗದವರೇ ಸಂಗಣ್ಣ ನವರ ಬೆನ್ನೆಲಬು ಆಗಿ ಶಕ್ತಿ ತುಂಬಿ ಬೆಳೆಸುತ್ತಿರುವದು ಕೂಡಾ ಆರೋಗ್ಯ ಪೂರ್ಣ ಸಮಾಜದ ಕರ್ತವ್ಯವೆಂದೇ ಕ್ಷೇತ್ರದ ಜನರು ಭಾವಿಸಿದ್ದಾರೆ. ಇಷ್ಟೇ  ಅಲ್ಲದೇ ಈ ಕೆಳಕಂಡ ಯೋಜನೆಗಳನ್ನು ಕ್ಷೇತ್ರದ ಜನತೆಗೆ ಸಮರ್ಪಿಸಿದ ಕೀರ್ತಿ ಶಾಸಕ ಸಂಗಣ್ಣ ಕರಡಿಯವರಿಗೆ ಹೋಗಬೇಕಾಗಿದ್ದು ಅತ್ಯವಶ್ಯ.

No comments:

Post a Comment