Saturday, April 13, 2013

ರೈತನಿಂದ ನಾಯಕನವರೆಗೂ...


..ಸಂಗಣ್ಣ ಕರಡಿಯವರು ವಿವಿಧ ಯೋಜನೆಗಳಿಂದ ಕೊಪ್ಪಳ ವಿಧಾನ ಸಭಾ ಕ್ಷೇತ್ರವನ್ನು ಗಾಂಧೀಜಿಯವರ ಗ್ರಾಮ ಭಾರತದ ಕನಸನ್ನು ಒಳಗೊಂಡಂತೆ ತಮ್ಮ ದೀರ್ಘ ಕಾಲದ ಸಮಾಜಿಕ, ರಾಜಕೀಯ ಸೇವೆಗಳ ಅನುಭಗಳಿಂದ ಮತ್ತು ಸದಾ ಕ್ರೀಯಾಶೀಲ, ಅಧ್ಯಯನ, ಭೂತ, ವರ್ತಮಾನ, ಭವಿಷ್ಯ ಯೋಜನೆಗಳನ್ನು ಮೇಳೈಸಿಕೊಂಡು ಕೊಪ್ಪಳ ಕ್ಷೇತ್ರವನ್ನು
ಅಭಿವೃದ್ಧಿಗೊಳಿಸಿರುವುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮೂಲತಃ ಸ್ವಯಂ ಶ್ರಮಜೀವಿಗಳು, ಶಿಕ್ಷಣ ಪ್ರೇಮಿಗಳು, ಬಡವರ, ಧೀನ-ದಲಿತರ, ಅಲ್ಪಸಂಖ್ಯಾತರ ಕುರಿತಾಗಿ ಅಪಾರ ಕಾಳಜಿ ಹೊಂದಿರುವ ಮಾನ್ಯ ಶಾಸಕರು "ಶಾಸಕತ್ವದ ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯವೆಂದು" ೨೦೧೧ ರ ಕೊನೆಯಲ್ಲಿ ಶಾಸಕತ್ವದ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡವರು. ರೂ. ೧೨೦೦ ಕೋಟಿಗೂ ಹೆಚ್ಚು ಅನುದಾನವನ್ನು ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕೊಪ್ಪಳಕ್ಕೆ ಬಿಡುಗಡೆ ಮಾಡಿಸಿದರು. ಶಿಕ್ಷಣ, ವಸತಿ, ಕುಡಿಯುವ ನೀರು, ಕ್ಷೇತ್ರದ ಎಲ್ಲಾ ರಸ್ತೆಗಳು, ಕೊಪ್ಪಳ ನಗರವನ್ನು ಸರ್ವಾಂಗೀಣವಾಗಿ ಸುಸಜ್ಜಿತಗೊಳಿಸಿದ್ದು, ನೀರಾವರಿ ಯೋಜನೆಗಳು, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣ, ಗುಡಿ-ಮಸೀದಿಗಳ ಪುನರುಜ್ಜೀವನಗೊಳಿಸಿರುವುದು, ಕೊಪ್ಪಳ ತಾಲೂಕಿನ ಸಮಗ್ರ ರಸ್ತೆಗಳನ್ನು ಆಧುನಿಕವಾಗಿ ನಿರ್ಮಿಸಿರುವುದು, ಪರಿಶಿಷ್ಟ ಪಂಗಡಗಳ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿರುವುದು, ವಿವಿಧ ಗ್ರಾಮಗಳಲ್ಲಿ ಕೆರೆ-ಬಾವಿಗಳನ್ನು ತೋಡಿಸಿರುವುದು, ರಂಗಮಂದಿರಗಳನ್ನು ನಿರ್ಮಿಸಿರುವುದು, ಯಾತ್ರಾ ಕ್ಷೇತ್ರಗಳಲ್ಲಿ ಯಾತ್ರಾ ನಿವಾಸಗಳನ್ನು ನಿರ್ಮಿಸಲು ಅನುದಾನ ಮಂಜೂರಾಗಿರುವುದು, ಮುಂತಾದ ಕಾಮಗಾರಿಗಳು ತೀವ್ರ ಪ್ರಗತಿಯಲ್ಲಿರುವುದು, ಅರಣ್ಯ ಇಲಾಖೆಯ ಬೃಹತ್ ಅನುದಾನದಲ್ಲಿ ಜಿಂಕೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ರಕ್ಷಣೆ ಮಾಡಲು ಯೋಜನೆ ಕೈಗೊಂಡಿರುವುದು, ಮೀನುಗಾರಿಕೆ ಪ್ರೋತ್ಸಾಹಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು, ಒಟ್ಟಾರೆ ಮಾನ್ಯ ಶಾಸಕರು ಅವಿಶ್ರಾಂತವಾಗಿ ಶ್ರಮಿಸಿ ತಮ್ಮ ವೈಯಕ್ತಿಕ ಪ್ರಭಾವ ಬೀರಿ ಸರ್ಕಾರದ ಎಲ್ಲಾ ಯೋಜನೆಗಳ ಅನುದಾನ ಪಡೆದು ಕೊಪ್ಪಳ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಶ್ರೀಮಂತಗೊಳಿಸಿದ್ದಾರೆ. ಇದಲ್ಲದೇ ಅನೇಕ ಯೋಜನೆಗಳು ಅಂದರೆ, ಗ್ರಾಮೀಣ ಭಾಗದಲ್ಲಿ, ಹಳ್ಳಿ-ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆಗಳು, ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನಗಳು, ಹಾಲು ಉತ್ಪಾದನೆಯ ಸಹಕಾರ ಸಂಘದ ಕಟ್ಟಡಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಶಾಲಾ ಕೊಠಡಿಗಳು ಇಂತಹ ಹತ್ತು ಹಲವಾರು ಯೋಜನೆಗಳನ್ನು ಹಳ್ಳಿ-ಹಳ್ಳಿಗಳಿಗೆ ಮುಟ್ಟಿಸುವ ಅವರ ಶ್ರಮ ಅಪಾರ. 
                                     ಶ್ರೀಯುತ ಸಂಗಣ್ಣ ಕರಡಿಯವರ ವ್ಯಕ್ತಿತ್ವ ಅಪ್ಪಟ ಅಪರಂಜಿ, ಮಹಾಮಾನವತಾವಾದಿ,ಎಲ್ಲರನ್ನೂ ಪ್ರೀತಿಸುವ ಹಿರಿಮೆ ಉಳ್ಳವರು. ಜನಸೇವೆಯನ್ನೇ ಕಾಯಕ ಕೈಲಾಸವೆಂದುಕೊಂಡವರು. ಅಭಿವೃದ್ಧಿಯ ಕನಸುಗಾರ. ಕನಸಿನಂತೆ ಕ್ರಿಯೆ, ಕ್ರಿಯೆಗೆ ಪೂರಕ ಅಧ್ಯಯನ ಇವು ಸಂಗಣ್ಣನವರ ಯಶಸ್ಸಿನ ಅಂಶಗಳು. ಕ್ಷೇತ್ರದಲ್ಲಿ ೧೦ ಂ?ಂಜzಂ ಮಕ್ಕಳಿಂದ ೧೦೦ ಂ?ಂಜUಂಳ ಹಿರಿಯವರೆಗೆ ಎಲ್ಲರಿಗೂ "ಸಂಗಣ್ಣ ಕರಡಿ ಗೊತ್ತು" ವಿಧಾನಸಭೆಯಲ್ಲಿ ಕೊಪ್ಪಳವನ್ನು ಪ್ರತಿನಿಧಿಸುವ ಶಾಸಕರು ಸಂಗಣ್ಣ ಕರಡಿ ಒಬ್ಬರಾದರೆ, ಕೊಪ್ಪಳ ಕ್ಷೇತ್ರದಲ್ಲಿ ಅವರ ಸಹಸ್ರಾರು ಅಭಿಮಾನಿಗಳು "ಶಾಸಕರೆಂದರೆ ನಾವೇ, ಶಾಸಕರೆಂದರೆ ನಾವೇ" ಎಂದು ಹೆಮ್ಮೆ-ಅಭಿಮಾನಪಟ್ಟುಕೊಳ್ಳುವಷ್ಟು  ಜನ-ಮನ ಸಾಗರದಲ್ಲಿ
ಶಾಸಕರು ಬೆರೆತಿದ್ದಾರೆ. ಸಂಗಣ್ಣನವರ ಸರಳ ವ್ಯಕ್ತಿತ್ವದಿಂದಾಗಿ ಶಾಸಕತ್ವದ ಅಧಿಕಾರ ಸಾಮಾನ್ಯ ಜನತೆಯಲ್ಲಿ ಹಂಚಿ ಹೋಗಿದೆ. ಇ?ಇಔಲ್ಲಾ ಜನಾನುರಾಗಿಯಾಗಿ ಬೆಳೆದ ಸಂಗಣ್ಣನವರು ನಮ್ಮೆಲ್ಲರ ಅಣ್ಣನಾಗಿ ಈ ಕ್ಷೇತ್ರದ ಎಲ್ಲಾ ರೈತರ ಮನೆ ಮಗನಾಗಿ, ಸರ್ವ ಜನಾಂಗದ ಸಹೋದರನಾಗಿ, ಆಲದ ಮರದ ಹಾಗೆ ಬೆಳೆದು ಕ್ಷೇತ್ರ ಜನರಿಗೆಲ್ಲಾ ನೆರಳು ನೀಡಿದ, ಅಭಿವೃದ್ಧಿಯ ಪರ್ವವನ್ನು ಪ್ರಾರಂಭಿಸಿದ, ಯುದ್ಧೋಪಾದಿಯಲ್ಲಿ ಜನರ ಬೇಡಿಕೆಗಳನ್ನು ಈಡೇರಿಸಿದ ಎಲ್ಲಾ ಗುಣಗಳ ಸಾಕಾರ ಮೂರ್ತಿ. ಸಾರ್ಥಕ ಸಾಧನೆಯ ಬದುಕನ್ನು ಕಟ್ಟಿಕೊಂಡ ಸರ್ವತೋಮುಖ ಅಭಿವೃದ್ಧಿಗೆ ಮೆಟ್ಟಿಲು ನಿರ್ಮಾಣ ಮಾಡಿದ ಸಮಗ್ರ ವಿಕಾಸ ಸಂಕಲ್ಪ ತೊಟ್ಟ ಇನ್ನೂ ಸಾಗುತ್ತಿರಲಿ ಇವರ ಸಾಧನೆಯ ಪಯಣ...ಸಮಸ್ತ ಕ್ಷೇತ್ರದ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು...
ಇವರ ಸಾಧನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಕೊಪ್ಪಳ ಕ್ಷೇತ್ರದ ಹಾಗೂ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಹಿರಿಯ, ಕಿರಿಯ, ಮಹಿಳಾ ಪದಾಧಿಕಾರಿಗಳಿಗೆ, ಯುವ ಮಿತ್ರರಿಗೆ ಹಾಗೂ ಕಾರ್ಯಕರ್ತರಿಗೆ ಹಾಗೂ ಸಮಸ್ತ ಕ್ಷೇತ್ರದ ನಾಗರೀಕ ಬಂಧುಗಳಿಗೆ ಮತ್ತು ಅಭಿವೃದ್ಧಿಗೆ ಸಹಕರಿಸಿದ ಮಾಧ್ಯಮ ಬಂಧುಗಳಿಗೆ, ಬುದ್ಧಿ ಜೀವಿಗಳಿಗೆ, ಪ್ರಗತಿಪರ ಚಿಂತಕರಿಗೂ, ಸಾಹಿತಿಗಳಿಗೂ ನಮ್ಮ ಅಭಿಮಾನಿ ಬಳಗದವರಿಂದ ಅಭಿನಂದನೆಗಳು.... ..


"ಬಯಿದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆ-ತಾಯಿಗಳೆಂಬೆ,
ಆಳಿಗೊಂಡವರೆನ್ನ ಆಳ್ದವರೆಂಬೆ, ಜರಿದವರೆನ್ನು ಜನ್ಮ ಬಂಧುಗಳೆಂಬೆ
ಹೊಗಳಿದವರೆನ್ನು ಹೊನ್ನಶೂಲದಲಿಕ್ಕಿದರೆಂಬೆ, ಕೂಡಲ ಸಂಗಮದೇವ..."
ಎಂಬ ತತ್ವವನ್ನು ಮೈಗೂಡಿಸಿಕೊಂಡ ಸಂಗಣ್ಣ ಕರಡಿಯವರ ಜನಾನುರಾಗ ವ್ಯಕ್ತಿತ್ವ
ಕ್ಷೇತ್ರದ ಜನತೆಗೆ ಅಚ್ಚು-ಮೆಚ್ಚು...

No comments:

Post a Comment