Friday, May 3, 2013
Thursday, May 2, 2013
ಬಿ.ಜೆ.ಪಿ. ಬೃಹತ್ ರೋಡ್ ಶೋ
:
ಭಾರತೀಯ ಜನತಾ ಪಕ್ಷದ ಬೃಹತ್ ರೋಡ್ ಶೋ ಕಾರ್ಯಕ್ರಮವು ದಿ. ೦೩-೦೫-೨೦೧೩, ಶುಕ್ರವಾರದಂದು ಶ್ರೀ ಗವಿಮಠದಿಂದ ಸಾರ್ವಜನಿಕ ಮೈದಾನದವರೆಗೆ ಸಮಯ ಮಧ್ಯಾಹ್ನ ೧೨ ಗಂಟೆಯಿಂದ ೪ ಗಂಟೆಯವರೆಗೆ ನಡೆಯಲಾಗುವುದು. ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣನವರ ಮತ ಯಾಚನೆಯ ಈ ರೋಡ್ ಶೋ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾ, ತಾಲೂಕು, ಹೋಬಳಿ, ಮಹಿಳಾ ಘಟಕದ ಎಲ್ಲ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಬಿ.ಜೆ.ಪಿ. ಪ್ರಚಾರ ಸಮಿತಿ ವಕ್ತಾರ ಹಾಲೇ ಕಂದಾರಿ ತಿಳಿಸಿದ್ದಾರೆ.ಮನೆಯಂಗಳಕ್ಕೆ ಉನ್ನತ ಶಿಕ್ಷಣ : ಕರಡಿ ಸಂಗಣ್ಣ
ಮರೀಚಿಕೆ ಮತ್ತು ನಮ್ಮ ಭಾಗದವರಿಗೆ ಸರಳವಾಗಿ ಕೈಗೆಟುಕದಂತಿದ್ದ ಉನ್ನತ ಶಿಕ್ಷಣವು ನಮ್ಮ ಮನೆಯಂಗಳಕ್ಕೆ ಬಂದಿದೆ. ವೈದ್ಯಕೀಯ, ಇಂಇನಿಯರಿಂಗ್, ತೋಟಗಾರಿಕಾ ಕಾಲೇಜುಗಳು ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಕೇಂದ್ರೀಯ ವಿದ್ಯಾಲಯಕ್ಕೆ ಅನುದಾನ ಹೀಗೆ ನಮ್ಮ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಿದೆ. ಹಿಟ್ನಾಳ ಮತ್ತು ಬಂಡಿ ಹರ್ಲಾಪೂರಗಳಲ್ಲಿ ಡಿಗ್ರಿ ಕಾಲೇಜುಗಳು ನಮ್ಮ ಅವಧಿಯಲ್ಲೇ ಆದವುಗಳಾಗಿವೆ. ಇವುಗಳಲ್ಲದೇ ಸಿ.ಸಿ. ರಸ್ತೆ, ಕೊಳವೆ ಬಾವಿ ಮಂಜೂರಾತಿ, ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ ಇವೇ ಮುಂತಾದ ಪಾರದರ್ಶಕ ಮತ್ತು ಜನಪರ ಕೆಲಸಗಳನ್ನು ಬೇರೆ ಯಾವ ಪಕ್ಷವೂ ಮಾಡದ ರೀತಿಯಲ್ಲಿ ಶೀಘ್ರಗತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ. ಈ ಎಲ್ಲ ಯೋಜನೆಗಳೊಂದಿಗೆ ಇನ್ನೂ ನಮ್ಮ ಭಾಗಕ್ಕೆ ಸಲ್ಲಬೇಕಾಗಿರುವ ಅನೇಕ ಅಭಿವೃದ್ಧಿ ಯೋಜನೆಗಳು ಮುಂದುವರಿಯುವ ನಿಟ್ಟಿನಲ್ಲಿ, ಬಿ.ಜೆ.ಪಿ.ಗೆ ಮತ ಹಾಕಬೇಕು ಎಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ದಿ. ೦೨.೦೫.೧೩ ರಂದು ಕೊಪ್ಪಳ ಸಮೀಪದ ಬಂಡಿ ಹರ್ಲಾಪೂರ ಗ್ರಾಮದಲ್ಲಿ ಬಿ.ಜೆ.ಪಿ. ಪ್ರಚಾರ ಭಾಷಣದಲ್ಲಿ ಮತ ಯಾಚನೆ ಮಾಡುತ್ತ ಈ ಮೇಲಿನಂತೆ ನುಡಿದರು.
ಮಹಿಳಾ ಧುರೀಣೆ ಹೇಮಲತಾ ನಾಯಕ್ ಮಾತನಾಡಿ, ಕರಡಿ ಸಂಗಣ್ಣನವರು ಅಭಿವೃದ್ಧಿ ಹರಿಕಾರರಾಗಿದ್ದು, ಅವರು ಮಾಡಿದ ಕೆಲಸಗಳು, ತಂದ ಯೋಜನೆಗಳು ನಮ್ಮ ಕಣ್ಣ ಮುಂದೆಯೇ ಇದ್ದು, ಮೂಲಭೂತ ಸೌಕರ್ಯಗಳಿಂದ ಹಿಡಿದು, ಶಿಕ್ಷಣ, ಆರ್ಥಿಖ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಶ್ರಮ ಪಟ್ಟಿದ್ದಾರೆ. ದಣಿವರಿಯದ ಜನನಾಯಕರಂತಿದ್ದು, ಅವರಿಂದ ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ, ರೈತರ ಸಾಲ ಮನ್ನಾ, ಮಕ್ಕಳಿಗೆ ಬಾಲ ಭವನ, ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಜಿಲ್ಲಾ ಕ್ರೀಡಾಂಗಣ, ಹೈ ಮಾಸ್ಕ್ ದೀಪಗಳು, ಹೀಗೆ ಹಲವಾರು ಉತ್ತಮ ಕೆಲಸಗಳು ಆಗಿದ್ದು, ನಮ್ಮ ಈ ಭಾಗದ ಅಭಿವೃದ್ಧಿಗಾಗಿ ಮತ್ತೆ ಅವರನ್ನು ಬೆಂಬಲಿಸಬೇಕೆಂದು ಹೇಳುತ್ತ ಮತ ಯಾಚನೆ ಮಾಡಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಪೀರಾಹುಸೇನ ಹೊಸಳ್ಳಿ, ವಿರೂಪಾಕ್ಷಪ್ಪ ನವೋದಯ ಬಾಬಾ ಅರಗಂಜಿ, ಹಾಲೇಶ ಕಂದಾರಿ ಮೊದಲಾದವರು ಉಪಸ್ಥಿತರಿದ್ದರು
Subscribe to:
Posts (Atom)



