Saturday, April 13, 2013

ಅಧ್ಯಾತ್ಮಿ ಜೀವಿ ಸಂಗಣ್ಣ


ಭಾರತ ದೇಶದ ತಳಹದಿ ಆಧ್ಯಾತ್ಮ, ವಿಧಾನಸೌಧದ ಮೇಲಿರುವ   ಇರುವ ಘನವಾಕ್ಯ "ಸರ್ಕಾರದ ಕೆಲಸ ದೇವರ ಕೆಲಸ" ಅಂತೆಯೇ ಕ್ಷೇತ್ರದ ದೇವಾಲಯ-ಮಸೀದಿ-ದರ್ಗಾಗಳ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವಲ್ಲಿ ಸಂಗಣ್ಣನವರ ಆಸ್ತಿಕ ಪ್ರೀತಿ ಅಪಾರ. ರೂ. ೯.೩೦ ಕೋಟಿ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಈ ಕೆಳಗಿನಂತಿರುತ್ತವೆ. ಕೊಪ್ಪಳ ಜಿಲ್ಲೆಯ ಅಖಂಡ ಜನರ ಅಧ್ಯಾತ್ಮ ಕೇಂದ್ರವಾಗಿರುವ ಮತ್ತು ಅಕ್ಷರ ದಾಸೋಹ, ಅನ್ನ ದಾಸೋಹಕ್ಕೆ ಪ್ರಸಿದ್ಧಿಯಾಗಿರುವ ಶ್ರೀ ಗವಿಸಿದ್ದೇಶ್ವರನ ಪವಿತ್ರ ಕ್ಷೇತ್ರವಾಗಿರುವ ಶ್ರೀ ಗವಿಮಠಕ್ಕೆ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಾಗೂ ಜಾತ್ರೆಗೆ ಬಂದ ಯಾತ್ರಿಗಳಿಗೆ ಅನೂಕೂಲವಾಗಲೆಂದು ಅಪಾರ ಪ್ರಮಾಣದ ಅನುದಾನವನ್ನು ಸಂಗಣ್ಣ ಕರಡಿಯವರು ತಾವೊಬ್ಬ ಸಜ್ಜನ ರಾಜಕಾರಣಿ ಹಾಗೂ ಅಧ್ಯಾತ್ಮದ ಮುಖಾಂತರ ಜನರ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಸಮಾಜದ ಅಂಕು-ಡೊಂಕಗಳನ್ನು ತಿದ್ದುವ ಮಠಮಾನ್ಯಗಳಿಗೆ ಅನುದಾನ ನೀಡುವ ಮೂಲಕ ಕೊಪ್ಪಳ
ವಿಧಾನ ಸಭಾ ಕ್ಷೇತ್ರಕ್ಕೆ ಮುಕುಟದಂತಿರುವ ಶ್ರೀ ಮಠಕ್ಕೆ ತಮ್ಮದೇ ಆದ ಅಲ್ಪ ಭಕ್ತಿ ಕಾಣಿಕೆಯನ್ನು ಸರಕಾರದಿಂದ ಮಂಜೂರು ಮಾಡಿಸಿ ಶ್ರೀಮಠದ ಪ್ರತಿಯೊಬ್ಬ ಭಕ್ತರಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರ ಪ್ರಯತ್ನ ಅಜರಾಮರ ಹಾಗೂ ಅಲ್ಪಸಂಖ್ಯಾತ ಬಂಧುಗಳ ಅಧ್ಯಾತ್ಮ ತಾಣವೆನಿಸಿರುವ





ಶ್ರೀ ಮರ್ದಾನ ಅಲಿ ದರ್ಗಾದ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡಿದ್ದು ದರ್ಗಾಕ್ಕೆ ಹೋಗುವ ರಸ್ತೆಯನ್ನು ಸಿ.ಸಿ. ರಸ್ತೆ ನಿರ್ಮಿಸಿ ಮತ್ತು ಯಾತ್ರಿ ನಿವಾಸಕ್ಕಾಗಿ ೧ ಕೋಟಿ ಹಣವನ್ನು ಸರಕಾರದಿಂದ ಮಂಜೂರು ಮಾಡಿಸಿರುವ ಈ ಘನ ಕಾರ್ಯಕ್ಕೆ ಕ್ಷೇತ್ರದ ಅಲ್ಪಸಂಖ್ಯಾತ ಬಂಧುಗಳು ಮೆಚ್ಚುಗೆ ಸೂಚಿಸುವುದಲ್ಲದೇ ಸಂಗಣ್ಣ ಕರಡಿಯವರಲ್ಲಿರುವ ಅಧ್ಯಾತ್ಮ ಚಿಂತನೆಯನ್ನು ಕೊಂಡಾಡುತ್ತಿರುವುದು ನಿಜಕ್ಕೂ ಸಂತಸವೇ ಸರಿ. ಹಿಂದು-ಮುಸ್ಲಿಂರಲ್ಲಿ ಸರ್ವರಲ್ಲಿ ಸಮಬಾಳು ಸಮಪಾಲು ಎಂಬ ನೀತಿಯನ್ನುಮೂಡಿಸುವ ಮೂಲಕ ಎಲ್ಲಾ ಜಾತಿ ಜನಾಂಗದ ಜನರು ಶಾಂತಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಸಂಗಣ್ಣನವರ ಈ ಕಾರ್ಯವನ್ನು ಯಾರೂ ಮರೆಯಲಾರರು. 

೧. ಕೊಪ್ಪಳ ತಾಲೂಕಿನ ಮಸೀದಿ-ದರ್ಗಾಗಳ ಜೀರ್ಣೋದ್ದಾರಕ್ಕಾಗಿ ಆಡಳಿತಾತ್ಮಕ ಮಂಜೂರಾತಿ ಪಡೆಯಲಾಗಿದೆ. ೧೫ ಲಕ್ಷ
೨. ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿನ ವಿವಿಧ ದೇವಸ್ಥಾನಗಳ ಜೀರ್ಣೋದ್ದಾರ/ ಅಭಿವೃದ್ಧಿ/ದುರಸ್ತಿ/ನಿರ್ಮಾಣ ಉದ್ಧೇಶಕ್ಕಾಗಿ
ಅನುದಾನ ಬಿಡುಗಡೆ ೧೫೪ ಲಕ್ಷ
೩. ಹುಲಿಗಿ ಗ್ರಾಮದಲ್ಲಿ ಹುಲಿಗೆಮ್ಮ ದೇವಸ್ಥಾನದ ಹತ್ತಿರ ಯಾತ್ರಿ ನಿವಾಸ ನಿರ್ಮಾಣ ೧೦೦ ಲಕ್ಷ
೪. ಕೊಪ್ಪಳ ತಾಲೂಕಿನ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೆಚ್ಚುವರಿ ಅನುದಾನ ೩೧೦ ಲಕ್ಷ
 ೫. ಮಳೆಮಲ್ಲೇಶ್ವರ ಯಾತ್ರಾ ನಿವಾಸ ೧೦೦ ಲಕ್ಷ
೬. ಮರ್ದಾನ ಅಲಿ ದರ್ಗಾ ೧೦೦ ಲಕ್ಷ
೭. ಗವಿಮಠ ಯಾತ್ರಾ ನಿವಾಸ ೫೦ ಲಕ್ಷ
೮. ಗವಿಮಠ ಅಭಿವೃದ್ಧಿ ೨೦೦ ಲಕ್ಷ
೯. ಗವಿಮಠಕ್ಕೆ ೨ ಎಕರೆ ೨೫ ಗುಂಟೆ ಜಮೀನು ಮಂಜೂರು
೧೦. ಶಾದಿ ಮಹಲ್ ೫೦ ಲಕ್ಷ
೧೧. ಯಮನೂರಪ್ಪ ದರ್ಗಾದತ್ತಿರ ಸಿ.ಸಿ. ರಸ್ತೆ ೪೦ ಲಕ್ಷ

No comments:

Post a Comment