Saturday, April 13, 2013

ಕೊಪ್ಪಳ ನಗರಕ್ಕೊಂದು ಐತಿಹಾಸಿಕ ಕಾರ್ಮಿಕ ಆಸ್ಪತ್ರೆ


ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಕೈಗಾರಿಕೆಗಳನ್ನು ಹೊಂದಿದ ನಗರ ಸುಮಾರು  ೩೫ ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳು ಕಾರ್ಯಾರಂಭ ಮಾಡುತ್ತಿದ್ದು, ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಕೊಟ್ಟಿರುವುದು ಕೊಪ್ಪಳ ಕ್ಷೇತ್ರದ ಜನರ ಪುಣ್ಯವೇ ಸರಿ ಎನ್ನಬಹುದು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಕುಟುಂಬದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಈ ಕೈಗಾರಿಕೆಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಇಂತಹ ಕೈಗಾರಿಕೆಗಳಲ್ಲಿ ಕೆಲಸಮಾಡುವ ಕಾರ್ಮಿಕ ಬಂಧುಗಳಿಗೆ ಒಂದಿ?ಂಂಔ ಸರಕಾರದ ನೆರವು ಸಿಗಲೆಂದು ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ಆರೋಗ್ಯ ಭದ್ರತೆಯನ್ನು ನೀಡಬೇಕೆಂಬ ಮಹಾದಾಶೆಯಿಂದ ಸಂಗಣ್ಣ ಕರಡಿಯವರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯನ್ನು ಕೊಪ್ಪಳ ನಗರಕ್ಕೆ ಮಂಜೂರು ಮಾಡಿಸಿರುವುದು ನಿಜಕ್ಕೂ ಕಾರ್ಮಿಕರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. ಅದಲ್ಲದೇ ಈ ಆಸ್ಪತ್ರೆಯಿಂದ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕನಿಗಲ್ಲದೇ ಅವರ ಮನೆಯ ಸದಸ್ಯರಿಗೂ ಅಪಘಾತ ವಿಮೆ ಜಾರಿಗೊಳಿಸುವ ಸೌಲಭ್ಯ ಮತ್ತು ಇನ್ನಿತರ ಯಾವುದೇ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ಕೊಡುವ ಒಂದು ಸೌಲಭ್ಯ ಈ ಆಸ್ಪತ್ರೆಯಲ್ಲಿ ಒಳಗೊಂಡಿರುವುದರಿಂದ ಇದು ಸಂಗಣ್ಣನವರು ಕಾರ್ಮಿಕ ಸಮುದಾಯಕ್ಕೆ ನೀಡಿರುವ ಒಂದು ದೊಡ್ಡ ಕೊಡುಗೆಯೆಂದೇ ಹೇಳಬಹುದು. ಇದರಿಂದ ಬಡ ಕಾರ್ಮಿಕ ಬಂಧುಗಳು ಆರೋಗ್ಯ ಭದ್ರತೆಯನ್ನು ಕಾಪಾಡಿಕೊಂಡು
ಕೈಗಾರಿಕೆಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣವನ್ನು ನಿರ್ಮಾಣ ಮಾಡಿರುವುದು ನಿಜಕ್ಕೂ ಕೂಡಾ ಅಭಿನಂದನಾರ್ಹ. ಸಂಗಣ್ಣ ಕರಡಿಯವರು ಮಾಡಿದ ಈ ಸಾಮಾಜಿಕ ಪ್ರಜ್ಞೆ  ಇಡೀ ಕಾರ್ಮಿಕ ಕುಟುಂಬವನ್ನು ರಕ್ಷಣೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

No comments:

Post a Comment