Saturday, April 13, 2013

ಏಳು ಗ್ರಾಮಗಳ ಸ್ಥಳಾಂತರ


೨೦೧೦-೧೧ ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿ ಅತಿವೃಷ್ಟಿ ಉಂಟಾಗಿ ಹಲವು ಗ್ರಾಮಗಳು ನೀರಿನಲ್ಲಿ
ಕೊಚ್ಚಿಹೋದವು. ಕ್ಷೇತ್ರದ ಜನರು ಭಯಭೀತರಾಗಿ ಸೂರು ಕಳೆದುಕೊಂಡು ನೆಲೆಯಿಲ್ಲದೇ ತುತ್ತು ಅನ್ನಕ್ಕೂ ಪರಿತಪಿಸುವತಂಹ ವಾತಾವರಣ ನಿರ್ಮಾಣವಾಗಿತ್ತು, ಚಿಕ್ಕಸಿಂದೋಗಿ, ಗುನ್ನಳ್ಳಿ, ಹಿರೇಸಿಂದೋಗಿ, ಕೋಳೂರು, ಕಾಟ್ರಳ್ಳಿ, ನೆರೆಗಲ್ ಹಾಗೂ ಮಾದಿನೂರ ಗ್ರಾಮಸ್ಥರು ನಿಂತ ನೆಲವೇ ಭಾರವಾಗಿ ಆ ಸಂದರ್ಭದಲ್ಲಿ ನೀರೆಲ್ಲಾ ತುಂಬಿ ಹೋಗಿದ್ದ ಗ್ರಾಮಕ್ಕೆ ಶಾಸಕ ಸಂಗಣ್ಣ ಕರಡಿಯವರು ಭೇಟಿ ನೀಡಿದರು, ಅವರು ಮನಸ್ಸು ಕೂಡಾ ಕರಗಿಹೋಯಿತು. ಮಮ್ಮಲ ಮರಗಿದರು. ಮಮ್ಮಲ ಮರಗಿದ ಸಂಗಣ್ಣನವರು ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗ್ರಾಮಗಳನ್ನೇ  ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಹಲವಾರು ಕುಟುಂಬಗಳು ನೀರುಪಾಲಾಗಿದ್ದರಿಂದ ಆ ಎಲ್ಲಾ ಹಳ್ಳಿಗಳನ್ನು ತೀವ್ರ ಗತಿಯಿಂದ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು ಆದೇಶ ಮಾಡಿ ಸಂಗಣ್ಣನವರ ಜನಪರ ಕಾಳಜಿಯನ್ನು ಮೆಚ್ಚಿ ತುಂಬಿದ ಸಭೆಯಲ್ಲಿ ಅವರ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದ್ದು, ಮತ್ತು ಸೂರು ಕಳೆದುಕೊಂಡ ಗ್ರಾಮಸ್ಥರು ಸಂಗಣ್ಣನವರನ್ನು ನೆಚ್ಚಿದ್ದು ಇತಿಹಾಸ ಕಂಡ ಸತ್ಯವೇ ಆಗಿದೆ.

No comments:

Post a Comment