Saturday, April 13, 2013

ಕೊಪ್ಪಳ ನಗರಕ್ಕೆ ಸಂಚಾರ ಪೊಲೀಸ್ ಠಾಣೆ


ಕರ್ನಾಟಕ ರಾಜ್ಯದಲ್ಲಿಯೇ ಬೆಂಗಳೂರನ್ನು ಹೊರತು ಪಡಿಸಿದರೆ ಕೊಪ್ಪಳ ಕೈಗಾರಿಕಾ ನಗರವೆಂದೇ ಖ್ಯಾತಿ ಪಡೆದಿದೆ. ಸುಮಾರು ಲಕ್ಷಾಂತರ ಕಾರ್ಮಿಕರು ಆ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ಇವರು ಕೊಪ್ಪಳ ನಗರಕ್ಕೆ ಬಂದು ಹೋಗಲು ಅನೇಕ ಬಸ್ ವಾಹನಗಳ ಸೌಕರ್ಯವಿದೆ. ಹಾಗೂ ಹೊಸಪೇಟೆ ಮತ್ತು ಗದಗಿಗೆ ಹಾದು ಹೋಗುವ ಎನ್.ಹೆಚ್-೬೩ ರಸ್ತೆಯು ನಗರದ ಮಧ್ಯ ಭಾಗದಲ್ಲಿ ಇರುವುದರಿಂದ ವಿಪರೀತ ವಾಹನ ದಟ್ಟಣೆ ಮತ್ತು ಅಷ್ಟು  ಪ್ರಮಾಣದ ಜನಜಂಗುಳಿಯಿಂದ ಇಲ್ಲಿಯವರೆಗೆ ನಮಗೆ ಬಹಳಷ್ಟು ಸಮಸ್ಯೆ ಕಾಡುತ್ತಿತ್ತು. ಅನೇಕ ದುರಂತಗಳು, ಮಾರಕ ಅಪಘಾತಗಳಿಂದ ಅನೇಕ ಸಾವು-ನೋವುಗಳು ಆಗಿರುವುದು ನಮ್ಮ ಕಣ್ಣ ಮುಂದೆ ಇದೆ. ಹಾಗೂ ರಸ್ತೆಗಳಲ್ಲಿ ಹೋಗುವ ಸಾರ್ವಜನಿಕರಿಗೂ ಕೂಡಾ ಬಹಳಷ್ಟು  ತೊಂದರೆಯ ವಾತವಾರಣ ಇದ್ದುದ್ದನ್ನು ಗಮನಿಸಿದ ಸಂಗಣ್ಣ ಕರಡಿಯವರು ಸಾರ್ವಜನಿಕರ ತೊಂದರೆ ನೀಗಿಸಲು ಅಪಘಾತ ತಡೆಗಟ್ಟಲು ಸುಸಜ್ಜಿತ ರಸ್ತೆಯ ಜೊತೆಗೆ ಕೊಪ್ಪಳದ ಬಹು ದಿನಗಳ ಕನಸಾದ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಿಸಿದ್ದು, ಸಾರ್ವಜನಿಕರಿಗೆ ಸಂತಸ ತಂದಿದೆ. ಇದರಿಂದ ಮುಕ್ತವಾಗಿ ಸಾರ್ವಜನಿಕರು ಸಂಚರಿಸಲು, ವಾಹನ ಸವಾರರು ಸಂಚಾರ ಪೊಲೀಸ್ ಠಾಣೆಗಳ ನಿಯಮಾವಳಿಗಳನ್ನು ಪಾಲಿಸುತ್ತಾ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿರುವ ಸಂಗಣ್ಣ ಕರಡಿಯವರನ್ನು ಎಂದಿಗೂ ಮರೆಯಲಾಗದು

No comments:

Post a Comment