ಕೋಳೂರು, ಕೊಪ್ಪಳ, ೩೦ : ಭಾರತೀಯ ಜನತಾ ಪಕ್ಷವು ಜನಪರವಾಗಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿ ಪಕ್ಷದ ಪ್ರಮುಖ ಉದ್ಧೇಶಗಳಲ್ಲೊಂದಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ಕೃಷ್ಣಾ ಬಿ. ಸ್ಕೀಂ, ಸಿಂಗಟಾಲೂರು ಏತ ನೀರಾವರಿ, ಬೆಟಗೇರಿ ಏತ ನೀರಾವರಿ ಯೋಜನೆಗಳು ಈ ಭಾಗದ ೪೦ ಸಾವಿರ ಎಕರೆ ಭೂಮಿಯನ್ನು ಸದೃಢಗೊಳಿಸಲಿವೆ. ೪೦,೦೦೦ ಎಕರೆಯಷ್ಟು ನೀರಾವರಿಯಾಗುವುದರಿಂದ ರೈತರ ಒಡೆತನದಲ್ಲಿಯೇ ಸಕ್ಕರೆ ಕಾರ್ಖಾನೆಯನ್ನು ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡುವದಾಗಿ, ಇಂತಹ ಅನೇಕ ಯೋಜನೆಗಳು ಈ ಭಾಗಕ್ಕೆ ತಲುಪುವಂತೆ ಕಾರ್ಯ ಮಾಡಲು ಮತ್ತೊಂದು ಅವಕಾಶ ಕೊಡಬೇಕೆಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ದಿ. ೩೦.೦೪.೧೩ ರಂದು ಕೊಪ್ಪಳ ಸಮೀಪದ ಕೋಳೂರು ಗ್ರಾಮದಲ್ಲಿ ಬಿ.ಜೆ.ಪಿ. ಪ್ರಚಾ
ರ ಭಾಷಣದಲ್ಲಿ ಮತ ಯಾಚನೆ ಮಾಡುತ್ತ ಈ ಮೇಲಿನಂತೆ ನುಡಿದರು. ಮುಂದುವರಿದು ಮಾತನಾಡಿದ ಅವರು ಪಟ್ಟಣ ಸಿ.ಸಿ. ರಸ್ತೆ, ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ, ರೈತರ ಸಾಲ ಮನ್ನಾ, ಮಕ್ಕಳಿಗೆ ಬಾಲ ಭವನ, ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಜಿಲ್ಲಾ ಕ್ರೀಡಾಂಗಣ, ಹೈ ಮಾಸ್ಕ್ ದೀಪಗಳು, ಹೀಗೆ ಹಲವಾರು ಪ್ರಗತಿಪರ ಕೆಲಸಗಳು ಪಾರದರ್ಶಕವಾಗಿದ್ದು, ಅಭಿವೃದ್ಧಿ ಮತ್ತು ಹಿತಕ್ಕಾಗಿ ಬಿ.ಜೆ.ಪಿ. ಬೆಂಬಲಿಸಿ ತಮಗೆ ಮತ ಹಾಕಲು ವಿನಂತಿಸಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಪೀರಾಹುಸೇನ ಹೊಸಳ್ಳಿ, ವಿರೂಪಾಕ್ಷಪ್ಪ ನವೋದಯ ಮಾತನಾಡಿ ಕರಡಿ ಸಂಗಣ್ಣನವರ ಸರ್ವಾಂಗೀಣ ಅಭಿವೃದ್ಧಿಯನ್ನು, ಜಾತ್ಯತೀತ ಮನೋಭಾವವನ್ನು ಮೆಚ್ಚಿ ಮತ ನೀಡಿ ಗೆಲ್ಲಿಸಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿಭೋಜಪ್ಪ ಕುಂಬಾರ, ನೇಮಿರೆಡ್ಡಿ ಮೇಟಿ, ನಾಗರಾಜ ಗಾರವಾಡಮಠ, ದ್ಯಾಮಣ್ಣಗೌಡ ಗುಡ್ಡದಮೇಗಳ, ಮಹಾಂತೇಶ ಪಾಟೀಲ, ಶಿವಪುತ್ರಪ್ಪ ನಿಡಶೇಷಿ, ಚಂದ್ರು ಹಲಗೇರಿ, ಕಪ್ಪತ್ತಪ್ಪ, ಬಸಣ್ಣ ಕೊಡದಾಳ, ರಾಮಣ್ಣ ಪೂಜಾರ, ಗ್ರಾ.ಪಂ. ಸದಸ್ಯರಾದ ದೇವಪ್ಪ ಮತ್ತು ರಮೇಶ, ಶಾಶ್ವತಪ್ಪ ಡೊಳ್ಳಿನ, ರಾಮಣ್ಣ ಆಂಗಡಿ, ಮಲ್ಲಪ್ಪ ಹಡಪದ, ಬಸಣ್ಣ ಜೀರರ್, ಬಸಮ್ಮ ಹೂಗಾರ್ ಮೊದಲಾದವರು ಉಪಸ್ಥಿತರಿದ್ದರು.
No comments:
Post a Comment