Saturday, April 13, 2013

ಕೋಟೆಕೊತ್ತಲಗಳು ಹಾಗೂ ಕೆರೆಗಳ ಅಭಿವೃದ್ಧಿ ಮಾಡಿದ ನಾಯಕ



ಕೊಪ್ಪಳ ನಗರದ ಜನತೆಗೆ ಬಹುದಿನಗಳ ಬೇಡಿಕೆಯಾಗಿದ್ದ ಹುಲಿಕೆರೆ ಯೋಜನೆಯನ್ನು ಕೈಗೆತ್ತಿಕೊಂಡ ಸಂಗಣ್ಣನವರು
ಸಾರ್ವಜನಿಕರಿಗೆ ಶುದ್ಧವಾದ ಗಾಳಿ ಮತ್ತು ಆರೋಗ್ಯಕ್ಕೆ ಒತ್ತುಕೊಟ್ಟು ಹಾಗೂ ನಗರದ ಸೌಂದರ್ಯೀ-ಕರಣವನ್ನು ಹೆಚ್ಚಿಸಲು ದೋಣಿ ವಿಹಾರ ಸೌಲಭ್ಯವನ್ನು ಕಲ್ಪಸಿಕೊಟ್ಟು ನಗರದ ಜನತೆಗೆ ಮಹಾದುಪಕಾರ ಮಾಡಿದ್ದಾರೆ. ಅನೇಕಂ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಸರಕಾರದ ಅನುದಾನ ಕೊಡಿಸುವ ಮೂಲಕ ಕೊಪ್ಪಳ ನಗರಕ್ಕೆ ಅತ್ಯವಶ್ಯಕ ಜನರ ಆಶೋತ್ತರಗಳಿಗೆ ಸ್ಪಂದಿಸಲು ಸಹಕರಿಸಿದ ಸಾರ್ವಜನಿಕರನ್ನು, ಬುದ್ಧಿಜೀವಗಳನ್ನು ಹಾಗೂ ಪಕ್ಷದ ಎಲ್ಲಾ ಹಿರಿಯ ನಾಯಕರನ್ನು ಇಂದಿಗೂ ಕೂಡಾ ತುಂಬು ಹೃದಯದಿಂದ ಸ್ಮರಿಸುತ್ತಾರೆ. ಹುಲಿಕೆರೆ ಕೊಪ್ಪಳ ಜಿಲ್ಲೆಗೆ ಒಂದು ಐತಿಹಾಸಿಕ ತಾಣವಾಗಿ ಮಾರ್ಪಟ್ಟಿರುವುದು ಕೊಪ್ಪಳ ನಗರಕ್ಕೆ ಒಂದು ಹೊಸ ಆಯಾಮ ಕಲ್ಪಿಸಿಕೊಟ್ಟಿರುವುದು ನಗರದ ಜನತೆಗೆ ಸಂತಸ ಕೊಟ್ಟಿದೆ. ಸಂಜೆಯ ಸಮಯದಲ್ಲಿ ವಿಶ್ರಾಂತಿಗೆಂದು ಹೋದ ಜನರ ದೋಣಿ ವಿಹಾರ ಮಾಡುವ ಮೂಲಕ ಅಲ್ಲಿರುವ ಸುಂದರ ಪ್ರಕೃತಿಯನ್ನು ಕಂಡು ಆಶ್ಚರ್ಯಚಕಿತರಾಗಿ ತಮ್ಮ ದುಖ: ದುಮ್ಮಾನಗಳನ್ನು ದೂರಸರಿಸಿ ಸಂಗಣ್ಣನವರನ್ನು ಸ್ಮರಿಸದೇ ಇರಲಾರರು. ಹಾಗೂ ಇದರ ಜೊತೆಗೆ ಪೂರ್ವಜರು ಕಟ್ಟಿಕೊಂಡ ಕೋಟೆ ಕೊತ್ತಲಗಳನ್ನು ಉಳಿಸಿ-ಬೆಳೆಸುವ ಉದ್ದೇಶದಿಂದ
ಸರಕಾರದಿಂದ ೩ ಕೋಟಿ ಅನುದಾನವನ್ನು ತಂದು ಕೊಡುವಲ್ಲಿ ಕೊಪ್ಪಳ ಕ್ಷೇತ್ರದ ಜನತೆಗೆ ಎಲ್ಲಿಲ್ಲದ ಆನಂದವನ್ನುಂಟು ಮಾಡಿದೆ. ಐತಿಹಾಸಿಕ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಗುರುತಾಗಿರುವ ಕೋಟೆಗಳು ಕೊಪ್ಪಳ ನಗರದ ಸೌಂದರ್ಯವನ್ನು ಹೆಚ್ಚಿಸಿದೆ.

No comments:

Post a Comment