Sunday, April 28, 2013

ಕಾಂಗ್ರೆಸ್‌ನವರದು ಒಡೆದಾಳುವ ನೀತಿ : ಮಾರುತೆಪ್ಪ ಹಲಗೇರಿ



ಗಿಣಗೇರಿ, ೨೬ : ಕಾಂಗ್ರೆಸ್‌ನವರು ಕಳೆದ ೬೦ ವರ್ಷಗಳಿಂದ ದಲಿತರು, ಹಿಂದುಳಿದವರನ್ನು ಮತ್ತು ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಮಾಡಿಕೊಳ್ಳುತ್ತ, ಅವರಿಗಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ, ಒಡೆದಾಳುವ ನೀತಿಯನ್ನು ಅನುಸರಿಸುತ್ತ ದಲಿತರಿಗೆ ದ್ರೋಹವನ್ನು ಬಗೆದಿದೆ ಎಂದು ಎ.ಪಿ.ಎಂ.ಸಿ. ನಿರ್ದೇಶಕ ಮಾರುತೆಪ್ಪ ಹಲಗೇರಿ ಹೇಳಿದರು.
ಅವರು ದಿ. ೨೭.೦೪.೧೩ ರಂದು ಗಿಣಿಗೇರಿಯಲ್ಲಿ ನಡೆದ ಬಿ.ಜ.ಪಿ. ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ಇವರ ಪ್ರಚಾರ ಕಾರ್ಯದಲ್ಲಿ ಮಾತನಾಡುತ್ತ, ಕಾಂಗ್ರೆಸ್ ಪಕ್ಷವು ದಲಿತರಿಗೆ ಸಾರಾಯಿ ಕುಡಿಸುತ್ತ, ಓಟ್ ಪಡೆದುಕೊಂಡು ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಸ್ವತಂತ್ರ ಪೂರ್ವದಲ್ಲಿ ದಲಿತರು ಯಾವ ಸ್ಥಿತಿಯಲ್ಲಿದ್ದರೋ ಸ್ವಾತಂತ್ರ್ಯಾನಂತರದ ೬೦ ವರ್ಷಗಳವರೆಗೂ ಬಹುತೇಕ ಹಳ್ಳಿಗಳಲ್ಲಿ ಇದೇ ಸ್ಥಿತಿ ಇತ್ತು. ಇದಕ್ಕೆ ೬೦ ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷವೇ ಕಾರಣ. ಕಳೆದ ೫ ವರ್ಷಗಳ ಬಿ.ಜೆ.ಪಿ. ಸರಕಾರ ಅಸ್ವಿತ್ವಕ್ಕೆ ಬಂದಾಗಿನಿಂದ ದಲಿತರನ್ನು ಸಮಾಜದ ಮುಖ್ಯ ವಾಹಿನಿ ತರಲು, ಅವರನ್ನು ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡಲು ಆಶ್ರಯ ಮನೆಗಳ ವಿತರಣೆ, ದಲಿತ ಕಾಲೊನಿಗಳಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವಿಕೆ,, ಅರ್ಥಿಕವಾಗಿ ಸಬಲರಾಗಲು ಗಂಗಾ ಕಲ್ಯಾಣ ಯೋಜನೆ, ದಲಿತರ ಕಾಲೊನಿಗಳಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಸಾಮೂಹಿಕ ಏತ ನೀರಾವರಿ, ಉದ್ಯೋಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಸಾಲಸೌಲಭ್ಯ ಹೀಗೆ ಹತ್ತಾರು ಪ್ರಗತಿಪರ ಯೋಜನೆಗಳಿದ ದಲಿತರು ಮುಂದೆ ಬರಲು ಬಿ.ಜೆ.ಪಿ. ಸರಕಾರ ಕಾರಣವಾಗಿದೆ. ಸ್ವತಂತ್ರ ಬಂದಾಗಿನಿಂದ ಆಡಳಿತ ನಡೆಸಿದ ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣದಿಂದ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯವಾಗಿದ್ದು, ಪ್ರಗತಿಪರ, ಅಭಿವೃದ್ಧಿ ಪರ ಮನಸ್ಸುಳ್ಳ ಭಾರತೀಯ ಜನತಾ ಪಕ್ಷದ ಕರಡಿ ಸಂಗಣ್ಣನವರಿಗೆ ಮತ ಹಾಕಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ನಿಯೋಜಿತ ಅಭ್ಯರ್ಥಿ ಕರಡಿ ಸಂಗಣ್ಣ, ನಗರಸಭಾ ಮಾಜಿ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಎಸ್.ಕೆ. ವಕ್ಕಳದ, ವಿರೂಪಾಕ್ಷಪ್ಪ ನವೋದಯ, ಪೀರಾಹುಸೇನ ಹೊಸಳ್ಳಿ, ರಶೀದ್ ಸಾಬ್ ಮಿಠಾಯಿ, ಹೇಮಲತಾ ನಾಯಕ್, ಶೇಖgಪ್ಪ ಇಂದರಗಿ, ಕರಿಯಪ್ಪ ಮೇಟಿ ಮುಂತಾದವರು ಉಪಸ್ಥಿತರಿದ್ದರು.

No comments:

Post a Comment