Saturday, April 13, 2013

ಕ್ರೀಡಾಪಟುಗಳಿಗೊಂದು ಸಂತಸದ ಸುದ್ಧಿ



ಕೊಪ್ಪಳ ನಗರದ ಬಹುದಿನಗಳ ಬೇಡಿಕೆಯಾಗಿದ್ದ ಒಂದು ಸುಸಜ್ಜಿತ ಕ್ರೀಡಾಂಗಣದ ಕನಸು ನನಸಾಗಿರುವದು, ಕೊಪ್ಪಳ ನಗರದ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಯುವಕರು ಸಧೃಡ ಶಾರೀರಿಕ ಗುಣ ಮಟ್ಟವನ್ನು ಕಾಯ್ದುಕೊಳ್ಳುವ ಒಂದು ಸೌಲಭ್ಯವನ್ನು ಸಂಗಣ್ಣನವರು ಕೊಪ್ಪಳ ನಗರಕ್ಕೆ ಕೊಡುವುದರ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ, ಕ್ರೀಡಾಪಟುಗಳ ಪ್ರೀತಿಗೆ ಪಾತ್ರರಾಗಿದ್ದಾರೆಂದರೂ ತಪ್ಪಾಗಲಿಕ್ಕಿಲ್ಲ. ಒಂದು ಸುಸಜ್ಜಿತವಾದಂತಹ ವಿಶಾಲವಾದ ಕ್ರೀಡಾಂಗಣ ರೂಪಿಸುವುದರ ಜೊತೆಗೆ ಕಟ್ಟಡ ನಿರ್ಮಾಣ, ಪ್ರೇಕ್ಷರ ಗ್ಯಾಲರಿ, ಈಜುಗೊಳ, ದೈಹಿಕ ಶಾಲೆ, ಬ್ಯಾಡ್ಮಿಟನ್, ಜಿಮ್ ಸೌಲಭ್ಯಗಳು ಮೊದಲ ಬಾರಿಗೆ ಜಿಲ್ಲೆಯ ಜನತೆಗೆ ಸಿಕ್ಕಿರುವುದು ಮಹಾದಾನಂದವನ್ನುಂಟು ಮಾಡಿದೆ. ಈ ರೀತಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಿದ ಎಲ್ಲಾ ವರ್ಗದ ನೆಚ್ಚಿನ ನಾಯಕ ಸಂಗಣ್ಣ ಕರಡಿಯವರ ಈ ಅಭಿವೃದ್ಧಿಯನ್ನು ನೋಡಿದವರು ಸಂತಸ ಪಡಲಾರದೇ ಇರಲಾರರು. ಹೀಗೆ ಮಾಡಿದ ಅಭಿವೃದ್ಧಿ ಜಿಲ್ಲೆಯ ಜನತೆ ಸಮರ್ಪಣವಾದಾಗಿನಿಂದ ಜಿಲ್ಲೆಯ ಎಲ್ಲಾ ಜನತೆ ಖುಷಿಯಿಂದ ಇರುವುದಂತೂ ಕಂಡು ಬರುತ್ತದೆ. ಸಂಗಣ್ಣನವರ ಬಗ್ಗೆ ಅಭಿಮಾನದ ಮಾತುಗಳು ಎಲ್ಲೆಲ್ಲೂ ಮೊಳಗುತ್ತಿವೆ. ಈ ಅಭಿವೃದ್ಧಿಯೇ ಅವರಿಗೆ ದೊಡ್ಡ ಶಕ್ತಿಯಾಗಿ ನಿಲ್ಲಬಲ್ಲದೆಂಬ ವಿಶ್ವಾಸ ಅವರ ಅಭಿಮಾನಿಗಳದ್ದು.
"ಕಣ್ಣು ಮುಂದೆ ಗುರಿ ಇರಲು ಬೆನ್ನ ಹಿಂದೆ ಗುರು ಇರಲು, ಮೇರು ಪರ್ವತ ಇರಲಿ ಏರಲು ಯಶಸ್ಸು ನಿನ್ನದೇ ಎನ್ನುವ ವಿವೇಕಾನಂದರ ಮಾತು ಇಲ್ಲಿ ಪ್ರಸ್ತುತ ಎನಿಸುತ್ತದೆ." ಅದಲ್ಲದೇ ಸಂಗಣ್ಣನವರ ಅವಿರತ ಪರಿಶ್ರಮ, ಜನಪರ ಕಾಳಜಿ, ಯುವಕರಲ್ಲಿ ಕಿಚ್ಚನ್ನು ಹುಟ್ಟಿಸದೇ ಇರಲಾರದು, ಅವರು ಹುಟ್ಟು ಹಾಕಿದ ಅಭಿವೃದ್ಧಿ ಈ ಕ್ಷೇತ್ರದ ಯುವಕರಿಗೆ ಮಾದರಿ. ಶಾಲಾ ವಿದ್ಯಾರ್ಥಿಗಳೆಂದರೆ ಸಂಗಣ್ಣನವರಿಗೆ ಎಲ್ಲಿಲ್ಲದ ಪ್ರೀತಿ, ಬಸ್ ಪಾಸ್ ಇರಲಿ, ಫೀ ಕಟ್ಟುವದಿರಲೀ, ಪ್ರಯಾಣದ ಸಮಸ್ಯೆ ಇರಲೀ ತತಕ್ಷಣ ಸ್ಪಂದಿಸಿ, ವಿದ್ಯಾರ್ಥಿಗಳ ನೆರವಿಗೆ ಧಾವಿಸುವ ಅವರ ಗುಣ ನಿಜಕ್ಕೂ ಅವಿಸ್ಮರಣೀಯ.

No comments:

Post a Comment