Saturday, April 13, 2013

ಕೊಪ್ಪಳ ನಗರ ಕಲೆ ಮತ್ತು ಸಂಸ್ಕೃತಿಯತ್ತ ದಿಟ್ಟ ಹೆಜ್ಜೆ


ಯಾವುದೇ ಒಂದು ನಾಡು ಬೆಳೆಯಬೇಕಾದರೆ, ನೀರಾವರಿ, ಆರೋಗ್ಯ, ಶಿಕ್ಷಣ ಹೇಗೆ ಮುಖ್ಯವೋ ಪ್ರತಿಯೊಬ್ಬ  ಮನುಷ್ಯನ  ಬದುಕಿಗೆ ಕಲೆ ಮತ್ತು ಸಂಸ್ಕೃತಿ ಅಷ್ಟೇ  ಮುಖ್ಯವೆಂಬ ವಿಚಾರವನ್ನು ಮನಗಂಡ ಸಂಗಣ್ಣನವರು ಕೊಪ್ಪಳ ನಗರಕ್ಕೆ
ಜಿಲ್ಲಾ ರಂಗ ಮಂದಿರ ಮಂಜೂರು ಮಾಡಿಸುವುದರ ಮೂಲಕ ಸುಮಾರು ೩ ಕೋಟಿ ಅನುದಾನವನ್ನು ಸರಕಾರದಿಂದ ಕೊಡಿಸುವುದರ ಜೋತೆಗೆ ಕಲೆ ಮತ್ತು ಸಾಹಿತ್ಯವನ್ನು ಕೊಪ್ಪಳ ನಗರದಲ್ಲಿ ನಿರಂತರವಾಗಿ ಪೋಷಿಸಿಕೊಂಡು ಬರಲು ಬಹಳಷ್ಟು  ಸಹಕರಿಸಿದ್ದಾರೆ. ಅದಲ್ಲದೇ ಜೀವನಕ್ಕೆ ಕೇವಲ ಹಣ ಮುಖ್ಯವಲ್ಲ, ಬದುಕಿಗೆ ನೆಮ್ಮದಿ ಸಿಗಬೇಕಾದರೆ ಕಷ್ಟಗಳನ್ನು  ಮರೆಯಬೇಕಾದರೆ ಮನರಂಜನಾತ್ಮಕ ಹಾಗೂ ಈ ನಾಡಿನ ಕಲೆ ಮತ್ತು ಸಾಹಿತ್ಯವನ್ನು ಪ್ರತಿಬಿಂಬಿಸುವ ರಂಗ ಮಂದಿರಗಳ ಕೊಡುಗೆ ಅಪಾರವಾದದ್ದು, ಈ ಜಿಲ್ಲಾ ರಂಗ ಮಂದಿರ ಸ್ಥಾಪನೆಗೆ ಕೊಪ್ಪಳದ ಎಲ್ಲಾ ಸಾಹಿತಿ ಪ್ರೇಮಿಗಳು, ಕಲಾವಿದರು, ರಂಗ ಭೂಮಿಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ರಂಗಭೂಮಿ ಕಲಾವಿದರಿಗೆ ಎಲ್ಲಿಲ್ಲದ ಸಂತಸ ತಂದು ಕೊಟ್ಟಿರುವುದು ಇಡೀ ಕ್ಷೇತ್ರದಲ್ಲಿ ಕಂಡು ಬರುತ್ತದೆ. ಹಾಗೇ ಕರ್ನಾಟಕ ರಾಜ್ಯದ ಪರಂಪರೆಯನ್ನು, ಹಲವಾರು ಸಾಮಾಜಿಕ, ಆಧ್ಯಾತ್ಮಿಕ ನಾಟಕಗಳನ್ನು ಪ್ರದರ್ಶಿಸುವ ಹಾಗೂ ಕಲೆ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಬಲ ನೀಡಬಲ್ಲ
ಈ ಸುಂದರವಾದ ಸಾಂಸ್ಕೃತಿಕ ಭವನ ಕೊಪ್ಪಳ ನಗರಕ್ಕೆ ಮೆರಗು ನೀಡುತ್ತಿದೆ, ಹಾಗೇ ಪೂರ್ವಜರ ಕನಸುಗಳು ಇತಿಹಾಸವನ್ನು ನೆನಪು ಮಾಡುವ ಹಿಂದಿನ ರೈತಾಪಿ ಜನರ ಬದುಕನ್ನು ನೆನಪಿಸಿಕೊಳ್ಳುವ, ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ನಡೆಸಲು ಅತ್ಯಂತ ಪ್ರಯೋಜನಕಾರಿಯಾದ  ಸಾಂಸ್ಕೃತಿಕ ಭವನ ನಮ್ಮೆಲ್ಲರಿಗೂ ಆನಂದವನ್ನುಂಟು ಮಾಡಿದೆ. ಇದನ್ನು ಮಂಜೂರು ಮಾಡಿಸಲು ಶ್ರಮಿಸಿದ ಸಂಗಣ್ಣ ಕರಡಿಯವರ ಕಲೆ ಮತ್ತು ಸಾಹಿತ್ಯ ಪ್ರೇಮ ನಿಜಕ್ಕೂ ಕೂಡಾ ಮೆಚ್ಚುವಂತದ್ದು. ಈ ರಂಗ ಮಂದಿರ ಕೊಪ್ಪಳ ನಗರದ ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ದಾರಿ ದೀಪವಾಗಲಿ ಎಂದು ಅವರ ಅಭಿಮಾನಿ ಬಳಗ ಹಾರೈಸುತ್ತz

No comments:

Post a Comment