Saturday, April 13, 2013

ತರಕಾರಿ ಮಾರುಕಟ್ಟೆ ಸೌಲಭ್ಯ


ಕೊಪ್ಪಳ ಜಿಲ್ಲೆಯಾಗಿ ೧೬  ವರ್ಷ ಕಳೆದರೂ ಒಂದು ಸುಸಜ್ಜಿತವಾದ ತರಕಾರಿ ಮಾರುಕಟ್ಟೆ ಸೌಲಭ್ಯವಿಲ್ಲದಿರುವ ಕೊರಗು ತರಕಾರಿ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೂ ಕಾಡುತ್ತಿತ್ತು. ಇದನ್ನು ಮನಗಂಡ ಸಂಗಣ್ಣ ಕರಡಿಯವರು ತರಕಾರಿ ಮಾರಾಟಗಾರರಿಗೆ ಅನೂಕೂಲ ಮಾಡಿಕೊಡುವ ದೃಷ್ಟಿಯಿಂದ ಒಳ್ಳೆಯ ತರಕಾರಿ ಮಾರುಕಟ್ಟೆ ಮಂಜೂರು ಮಾಡಿಸಿಕೊಟ್ಟರುವುದು ಇಡೀ ಕೊಪ್ಪಳ ನಗರದ ತರಕಾರಿ ಮರಾಟಗಾರರಿಗೆ ಹಾಗೂ ಎಲ್ಲಾ ಗ್ರಾಮೀಣ ಭಾಗದ ಗ್ರಾಹಕರಿಗೂ ಸಂತಸ ತಂದಿದೆ. ಇದಕ್ಕಿಂತ ಪೂರ್ವ, ತರಕಾರಿ ಮರಾಟಗಾರರು ನೆಲದ ಮೇಲೆ ಕುಳಿತು ವ್ಯಾಪಾರ ಮಾಡುತ್ತಿದ್ದರು. ಅವರಿಗೆ ಮಳೆ, ಗಾಳಿ, ಬಿಸಿಲುಗಳಿಂದ ಯಾವುದೇ ರಕ್ಷಣೆಯಿರಲಿಲ್ಲ. ಮಳೆಯಾದರೆ ಸಾಕು ಇಡೀ ಮಾರುಕಟ್ಟೆ ತುಂಬಾ ನೀರು ಸಂಗ್ರಹವಾಗುತ್ತಿತ್ತು. ಅದರಿಂದ ಅನೇಕ ರೋಗಗಳು ಬರುವ ಸಂಭವವೇ ಹೆಚ್ಚಿತ್ತು. ಅದರ ಜೊತೆಗೆ ಇಕ್ಕಟ್ಟಾದ ಜಾಗೆ
ಮತ್ತು ಅವೈಜ್ಞಾನಿಕವಾದ ರಸ್ತೆಯಿಂದಾಗಿ ತರಕಾರಿ ಮಾರಾಟಗಾರರಿಗೆ ಬಹಳಷ್ಟು ತೊಂದರೆಗಳಾಗುತ್ತಿದ್ದವು. ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಂಗಣ್ಣ ಕರಡಿಯವರು ಸರಕಾರದಿಂದ ೫ ಕೋಟಿ ರೂ. ಗಳನ್ನು ಮಾರುಕಟ್ಟೆಯ ಆಧುನೀಕರಣಕ್ಕೆ ಹಾಗೂ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಸೌಲಭ್ಯ ನೀಡುವ ದೃಷ್ಟಿಯಿಂದ ಸರಕಾರದ ಅನುದಾನ ಕೊಡಿಸಿರುವುದು ಇಡೀ ತರಕಾರಿ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಸಂತಸ ತಂದಿದೆ.

No comments:

Post a Comment