Friday, April 12, 2013

ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ ಸಂಗಣ್ಣ



ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಕೊಪ್ಪಳ ಕ್ಷೇತ್ರದ ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಅಭಿವೃದ್ಧಿ ಕಾಮಗಾರಿಗಳನ್ನು ಸುಮಾರು ೩೮ ಕೋಟಿ ರೂಪಾಯಿಗಳ ಅನುದಾನದಲ್ಲಿ ೭೨ ಹಳ್ಳಿಗಳಲ್ಲಿ ಕೈಗೊಂಡಿರುತ್ತಾರೆ. ಅದೇ ರೀತಿ ಕೊಪ್ಪಳ ನಗರಕ್ಕೂ ಸಹ ರೂ. ೫೮ ಕೋಟಿ
ಅನುದಾನದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಅಭಿವೃದ್ಧಿ ಕಾಮಗಾರಿಯನ್ನು ಜಾರಿಗೊಳಿಸಿ, ನಗರ ಮತ್ತ ಹಳ್ಳಿಗಳ ಜನರನ್ನು ಜೊತೆ-ಜೊತೆಯಾಗಿ ಕರೆದುಕೊಂಡು ಹೋಗುವ ಪ್ರಮಾಣಿಕ ಪ್ರಯತ್ನ ಮಾಡಿರುವುದು ಅವರ ಕೆಲಸದಲ್ಲಿ ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರನೇ ಪ್ರಭುವೆಂಬ ಅರ್ಥವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಇವರು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕರ್ನಾಟಕದ ಕೆಲವೇ ಕೆಲವು ಶಾಸಕರಲ್ಲಿ ಇವರೂ ಒಬ್ಬರೆಂದು ಹೇಳಲು ಕ್ಷೇತ್ರದ ಜನ ಹೆಮ್ಮೆ ಪಡುತ್ತಾರೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಬಂದ ಇವರು ಸಾಮಾನ್ಯ ಜನರ Pಂ?ಂಔUಂಳನ್ನು ಸ್ವತ: ಅನುಭವಿಸಿ ಈ ಮಟ್ಟಕ್ಕೆ ಬೆಳೆದು ಕೊಪ್ಪಳ ಕ್ಷೇತ್ರದಲ್ಲಿ ಪ್ರಶ್ನಾತೀತ ನಾಯಕರಾಗಿ ಹೊರ ಹೊಮ್ಮಿರುವುದು ಕ್ಷೇತ್ರದ ಜನತೆಯ
ಸಂತಸವೇ ಸರಿ. ಇದಲ್ಲದೇ ಕೊಪ್ಪಳ ಕ್ಷೇತ್ರದ ಕೆರೆಗಳಿಗೆ ಕಾಯಕಲ್ಪ ಕೊಟ್ಟು ಹೊಸ ಆಯಾಮ ನೀಡಿ, ವಿಶೇಷ ಯೋಜನೆಯಡಿಯಲ್ಲಿ ೬೨ ಲಕ್ಷ ರೂ,ಗಳ ಅನುದಾನ ತಂದು ಕೊಡುವಲ್ಲಿ ಇವರು ಯಶಸ್ವಿಯಾಗಿರುವುದು ನಮ್ಮೆಲ್ಲರಿಗೂ ಗೌರವವೇ ಸರಿ.
.

೧) ಮುಂಡರಗಿ, ಮತ್ತು ಇತರೆ ೩೭ ಗ್ರಾಮಗಳಿಗೆ ಕುಡಿಯುವ
ನೀರು ಸರಬರಾಜು ಯೋಜನೆಗೆ ಹೆಚ್ಚುವರಿ ಅನುದಾನ ೨೧೯೦.೭೩ ಲಕ್ಷ
೨) ಮುದ್ಲಾಪೂರ ಮತ್ತು ಇತರೆ ೨೨ ಗ್ರಾಮಗಳಿಗೆ ಕುಡಿಯುವ
ನೀರು ಸರಬರಾಜು ಯೋಜನೆಗೆ ಹೆಚ್ಚುವರಿ ಅನುದಾನ ೯೯೫.೬೨ ಲಕ್ಷ
೩) ಇತರೆ ೧೩ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು
ಯೋಜನೆಗೆ ಹೆಚ್ಚುವರಿ ಅನುದಾನ ೬೧೦.೮೨ ಲಕ್ಷ
೪) ವಿಇಂ?ಂ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೆರೆಗಳ ಅಭಿವೃದ್ಧಿ ೬೨.೦೦ ಲಕ್ಷ

No comments:

Post a Comment