Saturday, April 13, 2013

ಸೂರಿಲ್ಲದವರಿಗೆ ಸೂರು ಕೊಟ್ಟ ಧೀರ

ಸಾಮಾನ್ಯ ಜನತೆಯ ಪ್ರತಿಯೊಬ್ಬರ ಕನಸು; "ಬದುಕಲೊಂದು ಮನೆ ಬೇಕು" ಎನ್ನುವುದಾಗಿರುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟ ಹೆಮ್ಮೆ ಸಂಗಣ್ಣನವರದ್ದು. ಸರ್ಕಾರದ ದಾಖಲೆಗಳ ಪ್ರಕಾರ ರಾಜ್ಯದಲ್ಲಿಯೇ ಅತೀ ಹೆಚ್ಚು ವಸತಿ
ಯೋಜನೆ ಪಡೆದದ್ದು ಕೊಪ್ಪಳ ಕ್ಷೇತ್ರ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಜನ್ಮ ನೀಡಿದ ತಾಯಿ ಋಣ ತೀರಿಸುವ ತವಕ ಇರುತ್ತದೆ. ಈ ನಾಡಲ್ಲಿ ಬೆಳೆದ ಪ್ರತಿಯೊಬ್ಬ ದೇಶ ಭಕ್ತನಿಗೆ ಈ  ಮಣ್ಣಿನ ಋಣ ತೀರಿಸುವ ತವಕ ಇರುತ್ತದೆ. ಅದರಂತೆ ಮತ ನೀಡಿದ ಮತದಾರ ಪ್ರಭುಗಳಿಗೆ ಋಣ ತೀರಿಸುವ ಶ್ರೇಷ್ಠ  ಕಾಯಕವನ್ನು ಅತ್ಯಂತ ಶ್ರದ್ಧೆ ಮತ್ತು ಪ್ರಮಾಣಿಕ-
ವಾಗಿ ಮಾಡಿರುವ ಸಂಗಣ್ಣ ಕರಡಿರವರ ಈ ಸಾಧನೆ ಇತಿಹಾಸದಲ್ಲಿ ಸೇರುವಂತದ್ದು. ಸೂರಿಲ್ಲದ ವರಿಗೆ ಸೂರು ಕೊಟ್ಟು
ಕೊಪ್ಪಳ ಕ್ಷೇತ್ರದ ಜನತೆಯ ನಿರಾಶ್ರಿತರಿಗೆ ಹಾಗೂ  ವಸತಿ ರಹಿತರಿಗೆ ಗ್ರಾಮೀಣ ಭಾಗಕ್ಕೆ ಸುಮಾರು ೬ ಸಾವಿರ ಮನೆಗಳನ್ನು ಕೊಟ್ಟಿದ್ದು ನಗರ ಪ್ರದೇಶಗಳಿಗೆ ಸುಮಾರು ೩ ಸಾವಿರ ಮನೆಗಳನ್ನು ನೀಡಿರುವುದು ಕರ್ನಾಟಕ ರಾಜ್ಯದಲ್ಲಿಯೇ ಕೊಪ್ಪಳ ಕ್ಷೇತ್ರ ಮೊದಲನೆಯದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಶರಣರು ಬಾಳಿ ಹೋದ ಈ ನಾಡಿನಲ್ಲಿ ಸಂಸ್ಕೃತಿಯ ಜೋತೆ ಜೋತೆಗೆ ಆಶ್ರಯ ಇಲ್ಲದವರಿಗೆ ಶಕ್ತಿ ತುಂಬುವ ಕಾಯಕವನ್ನು ರಾಜಕೀಯದುದ್ದಕ್ಕೂ ಮಾಡಿಕೊಂಡು ಬಂದಿರುವ ಸಂಗಣ್ಣ ಕರಡಿಯವರನ್ನು ಈ ಕ್ಷೇತ್ರದ ಬಡವರು ಎಂದಿಗೂ ಕೂಡಾ ಮರೆಯಲಾರರು. ಅದಲ್ಲದೇ ರಟ್ಟೆಯನ್ನೇ ನಂಬಿ ಬದುಕುವ ನಮ್ಮ ಹಮಾಲರ ಬಂಧುಗಳಿಗೆ ವಿಶೇಷ ಮನೆಗಳನ್ನು ನಿರ್ಮಾಣ ಮಾಡಿ ಅವರ ನೋವಿನಲ್ಲಿ ಭಾಗಿಯಾಗಿ ಅವರ ಪ್ರೀತಿಗೆ ಪಾತ್ರರಾಗಿರುವ ಸಂಗಣ್ಣನವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು, ಈ ನಾಡಿನ ಕಟ್ಟ ಕಡೆಯ ಬಡವನ ಮನೆಗೂ ಹೋಗಿ ಬರುವ ಒಬ್ಬ ಧೀಮಂತ ನಾಯಕ ಯಾರದರೂ ಇದ್ದರೆ ಅದು ಸಂಗಣ್ಣ ಕರಡಿಯವರು ಮಾತ್ರ ಎಂಬುದು ಜನಜನಿತ. ಮತ್ತು ಅತ್ಯಂತ ಆರ್ಥಿಕತೆಯಿಂದ ಹಿಂದುಳಿದಿರುವ ಮೀನುಗಾರರ ಕುಟುಂಬಕ್ಕೆ ೫೦ ಮನೆಗಳನ್ನು ನಿರ್ಮಿಸಿಕೊಡಲು ೩ ಕೋಟಿ ಅನುದಾನವನ್ನು ತಂದು ಕೊಟ್ಟಿರುವುದು ಶ್ಲಾಘನೀಯವಾದದ್ದು. ನಗರವಾಸಿಗಳಿಗೆ ಸೂರು ಕಲ್ಪಿಸುವ ಕನಸು ಹೊತ್ತ ಸಂಗಣ್ಣನವರು ಈಗಾಗಲೇ ಕೊಪ್ಪಳ-ಹಿರೇಸಿಂದೋಗಿ ರಸ್ತೆಯಲ್ಲಿ ಸುಂದರ ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿರುವರು. ಮತ್ತು ಕಾಮಗಾರಿ ಪ್ರಾರಂಭವಾಗಿರುವದನ್ನು ಪ್ರತಿನಿತ್ಯ ಜನ ವೀಕ್ಷಿಸುತ್ತಿರುವದು ಸತ್ಯದ ಮಾತು. ಈ ಗ್ರಾಮೀಣ ಮತ್ತು ನಗರ ವಾಸಿಗಳಿಗೆ ಹಾಗೂ ಹಮಾಲರಿಗೆ ಮತ್ತು ಮೀನುಗಾರರಿಗೆ ಮನೆಗಳನ್ನು ಕಲ್ಪಿಸಿ ಕೊಡುವಲ್ಲಿ ವಸತಿ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ ನವರನ್ನು ಸಂಗಣ್ಣನವರು ಇಂದಿಗೂ ಸ್ಮರಿಸುತ್ತಾರೆ. ಗುಡಿಸಲು ರಹಿತ ಕೊಪ್ಪಳ ಕ್ಷೇತ್ರವನ್ನಾಗಿಸಲು ಪಣತೊಟ್ಟ ಸಂಗಣ್ಣನವರು ನುಡಿದಂತೆ ನಡೆದು ಬಡವರ ಪ್ರೀತಿಗೆ ಪಾತ್ರರಾಗಿದ್ದಾರೆ.



೧) ಕೊಪ್ಪಳ ತಾಲೂಕಿನ ಗ್ರಾಮೀಣ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ೬೦೦೦ ಮನೆಗಳನ್ನು ಮಂಜೂರು ಮಾಡಿಸಲಾಗಿದೆ.
೨) ೨೦೧೧-೧೨ನೇ ಸಾಲಿನಲ್ಲಿ ಮತ್ಸ್ಯಾಶ್ರಯ-೫ ಯೋಜನೆಯಡಿಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ೫೦ ಮನೆಗಳ ಹಂಚಿಕೆ (ಪ್ರತಿ ಮನೆಗೆ ರೂ. ೬೦ ಸಾವಿರಗಳಂತೆ) ೩೦೦ ಲಕ್ಷ
೩) ಸಿಂಧೋಗಿ ರಸ್ತೆಯಲ್ಲಿ ಉತ್ತಮ ಮನೆಗಳ ನಿರ್ಮಾಣಕ್ಕೆ ಚಾಲನೆ.

No comments:

Post a Comment