Friday, April 12, 2013

ದಾಖಲೆಗಳ ಪ್ರಮಾಣದಲ್ಲಿ ರಸ್ತೆಗಳ ಅಭಿವೃದ್ಧಿ


ಸಂಗಣ್ಣ ಕರಡಿಯವರು ಕೃಷಿ, ನೀರಾವರಿ, ಕುಡಿಯುವ ನೀರು, ಶಿಕ್ಷಣಗಳಿಗೆ ಆದ್ಯತೆ ಕೊಟ್ಟಂತಯೇ ಅಭಿವೃದ್ಧಿಯ ಪ್ರಮುಖ ಲಕ್ಷಣಗಳಲ್ಲಿ ಪ್ರಮುಖವಾಗಿರುವ "ರಸ್ತೆಗಳ ನಿರ್ಮಾಣ" ದಲ್ಲಿ ಗ್ರಾಮೀಣ ಭಾಗವನ್ನು ಒಳಗೊಂಡಂತೆ ಕ್ಷೇತ್ರದಾದ್ಯಂತ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲು ಹೆಚ್ಚು ಒತ್ತುಕೊಟ್ಟಿದ್ದು, ಜನರ ಪ್ರಶಂಸೆಗೆ ಒಳಗಾಗಿರುತ್ತದೆ. ವೇಗದ ಬದುಕಿಗೆ ಸುರಕ್ಷಿತೆಗಾಗಿ ರಸ್ತೆಗಳ ನಿರ್ಮಾಣ ಅಗತ್ಯ ಎನ್ನುವುದು ಸಂಗಣ್ಣನವರು ಸದಾ ಭಾಷಣದಲ್ಲಿ  ಪ್ರಸ್ತಾಪಿಸುವುದು ತಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಪ್ರಸ್ತುತ ಕ್ಷೇತ್ರದಲ್ಲಿ ಒಟ್ಟು ರೂ. ೨೮೭.೭೧ ಕೋಟಿ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಇಡಿ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿರುವದು ಸಂಗಣ್ಣ ಕರಡಿಯವರ ಅಭಿವೃದ್ಧಿ ಕಾರ್ಯಕ್ಕೆ ಹೊಸ ಆಯಾಮ ಮತ್ತು ಅಭಿವೃದ್ಧಿಯ ಮೂಲಕ ಕ್ಷೇತ್ರದ ದಿಕ್ಕನ್ನೇ ಬದಲಿಸಿದ ಈ ರಸ್ತೆಯ ಅಭಿವೃದ್ಧಿ ನಿಜಕ್ಕೂ ಕೂಡಾ ಶ್ಲಾಘನೀಯ. ಕ್ಷೇತ್ರದ ಜನತೆಗೆ ಗೊತ್ತಿರುವ ಹಾಗೆ ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿ ಅನೇಕ ರಸ್ತೆಗಳು ಅಂದರೆ ನೂರಕ್ಕೆ ತೊಂಬತ್ತರಷ್ಟು ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವದನ್ನು ಮನಗಂಡು ವಿಧಾನ ಸಭೆ ಕ್ಷೇತ್ರವನ್ನು ಸಂಚರಿಸಿ ಹಾಳಾಗಿರುವ ರಸ್ತೆಗಳ ಪಟ್ಟಿ ಮಾಡಿ ಇವುಗಳ ದುರಸ್ಥಿಗಾಗಿ ಹಣ ಮಂಜೂರ ಮಾಡಬೇಕೆಂದು ಜೆ.ಡಿ.ಎಸ್. ಶಾಸಕನಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ
ಅನಿರ್ದಿಷ್ಟ   ಕಾಲಾವಧಿ ಧರಣಿ ಆರಂಭಿಸಿದ್ದು ಇದರಲ್ಲಿ ಕ್ಷೇತ್ರದ ಜನರೇಲ್ಲಾ ಪಾಲ್ಗೊಂಡಿದ್ದು ತಮಗೆಲ್ಲರಿಗೂ ತಿಳಿದ ವಿಷಯ. ಅದಲ್ಲದೇ ಹಿರೇಹಳ್ಳ ಸೇತುವೆ ಕೂಡಾ ಅದೇ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ಕ್ಷೇತ್ರದ ಜನರಿಗೆ ದಿಕ್ಕೇ ತೋಚದಂತಾಗಿತ್ತು, ಆ ಸಂದರ್ಭದಲ್ಲಿ ಸಂಗಣ್ಣ ಕರಡಿಯವರಿಗೆ ಹೋರಾಟ ಮಾಡದೇ ಬೇರೆ ದಾರಿಯೇ ಇರಲಿಲ್ಲ ಇದಕ್ಕಾಗಿ ಹೋರಾಟ ತೀವ್ರಗೊಳ್ಳುತ್ತಿತ್ತು, ದಿನದಿಂದ ದಿನಕ್ಕೆ ಜನರು ಜಮಾವಣೆಗೊಳ್ಳುತ್ತಾ ಹೋದರು, ಇಡೀ ಕ್ಷೇತ್ರದ ಜನತೆ ಸಂಗಣ್ಣ ಕರಡಿಯವರ ಬೆನ್ನಿಗೆ ನಿಂತರು, ಮುಂದಾಳತ್ವ ವಹಿಸಿದ ರೈತ ನಾಯಕ ಸಂಗಣ್ಣ ಕರಡಿಯವರ ಹೋರಾಟ ತೀವ್ರ ಸ್ವರೂಪ ಪಡೆಯುವ ಮುನ್ಸೂಚನೆ ಪಡೆದ ಸರಕಾರ ಅದೇ ತಾನೇ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದ ಶ್ರೀ ಲಕ್ಷ್ಮಣ ಸವದಿ
ರವರು ಕೊಪ್ಪಳ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ್ದರು. ಸಂಗಣ್ಣ ಕರಡಿಯವರ ಹೋರಾಟದ ಲವಲವಿಕೆಯನ್ನು ಕಂಡ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಂಗಣ್ಣ ಕರಡಿಯವರ ಹೋರಾಟದ ಶಕ್ತಿಯನ್ನು ಮತ್ತು ಅವರಲ್ಲಿರುವ ಜನಪರ ಕಾಳಜಿಯನ್ನು ಕಂಡು ಬೆರಗಾದ ಶ್ರೀ ಲಕ್ಷ್ಮಣ ಸವದಿಯವರು ಒಂದು ಮಾತುಕತೆಯ ಮೂಲಕ ಸಂಗಣ್ಣ ರವರನ್ನು ಆಹ್ವಾನಿಸಿದರು. ತಕ್ಷಣ ಕಾರ್ಯಕರ್ತರೊಂದಿಗೆ ಮಾತಿಗಿಳಿದ ಸಂಗಣ್ಣ ಕರಡಿಯವರು ಹೇಳಿದ್ದು ಒಂದೇ ನೀವು ಏನೇ ಮಾಡಿ ನನ್ನ ಕ್ಷೇತ್ರದಲ್ಲಿರುವ ಎಲ್ಲಾ ರಸ್ತೆಗಳಿಗೆ ಅನುದಾನ ಕೊಡಬೇಕು ಇಲ್ಲದಿದ್ದಲ್ಲಿ ಇಡೀ ಕ್ಷೇತ್ರದ ಜನತೆಯ ಜೊತೆಗೆ ಬಂಡಾಯದ ಬಾವುಟು ಹಾರಿಸುವುದಾಗಿ ವಾಗ್ದಾನ  ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ತಾವುಗಳು ಪಕ್ಷಕ್ಕೆ ಬರುವದಾದರೇ ನಿಮ್ಮಲ್ಲೇ ರಸ್ತೆಗಳ ಅಭಿವೃದ್ಧಿಗೆ
ಹಾಗೂ ಇನ್ನಿತರ ಎಲ್ಲಾ ಕೆಲಸಗಳಿಗೂ ಅನುದಾನ ಕೊಡಿಸಲು ನಾನು ಸಿದ್ಧ ಅಂತಾ ವಾಗ್ಧಾನ  ಮಾಡಿದರು. ತಕ್ಷಣ ಕಾರ್ಯಕರ್ತರೊಂದಿಗೆ ಚರ್ಚಿಸಿದ ಸಂಗಣ್ಣ ಕರಡಿಯವರು ಕಾರ್ಯಕರ್ತರ ಆಶಯದಂತೆ ಜನತೆ ನೀಡಿದ ಶಾಸಕ ಸ್ಥಾನವನ್ನು ಜನತೆಗೋಸ್ಕರ ತ್ಯಾಗ ಮಾಡಲು ಸಿದ್ಧರಾದರು. ರಸ್ತೆಗಳ ಅಭಿವೃದ್ಧಿಯ ಅವರ ಕನಸು ಭಾರತೀಯ ಜನತಾ ಪಾರ್ಟಿ ಪಕ್ಷವನ್ನು ಸೇರುವಂತೆ ಮಾಡಿತು. ಇದಾದ ಮೇಲೆ ಕ್ಷೇತ್ರದಲ್ಲಿ ಹಲವಾರು ಅಪವಾದಗಳು ಅವರ ಮೇಲೆ ಬಂದವು. ಅಭಿವೃದ್ದಿ ಎಂದು ಶಾಸಕರು ಪಕ್ಷಾಂತರ ಮಾಡಿದ್ದರೆ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ವಿರೋಧ ಪಕ್ಷದರು ಕುಹಕವಾಡಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸಂಗಣ್ಣನವರು ಕೇವಲ ೧೧ ತಿಂಗಳಲ್ಲಿ ಕೊಪ್ಪಳ ಕ್ಷೇತ್ರವನ್ನು ನಿರೀಕ್ಷಗೂ ಮೀರಿ ಅಭಿವೃದ್ಧಿಪಡಿಸಿ ದಾಖಲೆ ಮಾಡಿದರು.
ಅವರ ಈ ಜನಪರ ಕಾರ್ಯ ಅವರು ತೆಗೆದುಕೊಂಡ ನಿಲವು, ಮಾಡಿ ತೋರಿಸಿದ ಅಭಿವೃದ್ಧಿ ಇಡೀ ಕ್ಷೇತ್ರದ ಜನತೆಯನ್ನು ಮೆಚ್ಚಿಸಿತು. ಸಂಗಣ್ಣ ಕರಡಿಯವರು ರಾತ್ರೋರಾತ್ರಿ ನಾಯಕರಾಗಲಿಲ್ಲ,ಜನಪರ ಹೋರಾಟದ ಮುಖಾಂತರ, ಹಿಂದುಳಿದ ಕೊಪ್ಪಳ ಕ್ಷೇತ್ರಕ್ಕೆ ಸಮಾಜಿಕ ನ್ಯಾಯ ಕೊಡುವ ಮೂಲಕ ಹಾಗೂ ಸರ್ವ ಜನಾಂದವರನ್ನು ಜೋತೆಗೆ ಕರೆದುಕೊಂಡು ಹೋಗುವ ವ್ಯಕ್ತಿತ್ವದ ಮೂಲಕ ಎಲ್ಲಾ ಸಮಾಜದ ಬಲಿಷ್ಟ ಶಕ್ತಿಯಾಗಿ ಹೊರಹೊಮ್ಮಿದರು. ಅವರ ಶ್ರಮ,ಅವರ ಅಭಿವೃದ್ಧಿ ಮಾಡಬೇಕೆಂಬ ಲವಲವಿಕೆ, ಇನ್ನೂ ಮಾಡಬೇಕೆಂಬ ಅವರ ತುಡಿತದಿಂದ ಈ ಕೆಳಕಂಡ ರಸ್ತೆಗಳು ಸಂಪೂರ್ಣ ಪ್ರಗತಿ ಕಂಡವು.


No comments:

Post a Comment